ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

By
1 Min Read

ಹೈದರಾಬಾದ್: ಮದುವೆಯಾದ 6 ತಿಂಗಳಿಗೆ ಹೈದರಾಬಾದ್‌ನ (Hyderabad) ಸಾಫ್ಟ್‌ವೇರ್‌ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬರುತ್ತಿದೆ.

ಹೈದರಾಬಾದ್‌ನ ರಾಯದುರ್ಗಂ (Raidurgam) ನಿವಾಸಿ ದೇವಿಕಾ (35) ನೇಣಿಗೆ ಶರಣಾಗಿರುವ ಟೆಕ್ಕಿ. ಹೈಟೆಕ್ ಸಿಟಿಯ ಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ದೇವಿಕಾ. ಮಾ. 2ರಂದು ರಾತ್ರಿ ಹೈದರಾಬಾದ್‌ನ ತಮ್ಮ ಮನೆಯಲ್ಲಿ ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ

ಪತ್ನಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪತಿ ಸತೀಶ್, ದೇವಿಕಾ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

ಆರು ತಿಂಗಳ ಹಿಂದೆ ಗೋವಾದಲ್ಲಿ ಅದ್ಧೂರಿ ಮದುವೆ ನಡೆದಿತ್ತು. ಮದುವೆಯ ಬಳಿಕ ದಂಪತಿ ರಾಯದುರ್ಗಂನಲ್ಲಿರುವ ಅಪಾರ್ಟ್ಮೆಂಟ್ ಸ್ಥಳಾಂತರಗೊAಡಿದ್ದರು. ಇಬ್ಬರೂ ಸಣ್ಣಪುಟ್ಟ ವಿಚಾರಗಳಿಗೂ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: `ಬಿ’ ಖಾತಾ ಅಭಿಯಾನದಿಂದ 55 ಲಕ್ಷ ಮನೆ, ನಿವೇಶನಗಳಿಗೆ ದಾಖಲೆ – ಬೈರತಿ ಸುರೇಶ್

ಮದುವೆಯ ನಂತರ ಸತೀಶ್ ವರದಕ್ಷಿಣೆಗಾಗಿ ದೇವಿಕಾಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ತನಿಖೆ ಮಾಡಿ: ನಾಗರಾಜ್ ಯಾದವ್

ಘಟನಾ ಸ್ಥಳಕ್ಕೆ ಆಗಮಿಸಿದ ರಾಯದುರ್ಗಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವೇದವ್ಯಾಸ್ ಕಾಮತ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಖಂಡನೆ – ಸರ್ಕಾರಕ್ಕೆ ತೀವ್ರ ತರಾಟೆ

Share This Article