ಪ್ರೀತಿಸುವಂತೆ ಯುವತಿಯನ್ನು ಪೀಡಿಸಿ ಹಲ್ಲೆ – ಬೆಂಗಳೂರಲ್ಲಿ ಕಾಮುಕ ಟೆಕ್ಕಿ ಅಂದರ್

Public TV
1 Min Read

ಬೆಂಗಳೂರು: ಪ್ರೀತಿಸುವಂತೆ ಯುವತಿಯನ್ನು ಪೀಡಿಸಿ, ಹಲ್ಲೆ ಮಾಡಿರುವ ಕಾಮುಕ ಟೆಕ್ಕಿಯನ್ನು (Techie) ಬನಶಂಕರಿ ಪೋಲಿಸರು (Banashankari Police) ಬಂಧಿಸಿದ್ದಾರೆ.

ಶ್ರೀಕಾಂತ್(45) ಬಂಧಿತ ಟೆಕ್ಕಿ. ಶ್ರೀಕಾಂತ್‌ಗೆ ಈ ಹಿಂದೆ ಮದುವೆಯಾಗಿದ್ದು, ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಕಾಲೇಜು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ – ಜಮ್ಮು ಸರ್ಕಾರ ಅಲರ್ಟ್; ವೈದ್ಯಕೀಯ ಸಿಬ್ಬಂದಿ ರಜೆ ರದ್ದು

ಈ ಬಗ್ಗೆ ಯುವತಿಯು ಆತನ ಪತ್ನಿಗೆ ದೂರು ನೀಡಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಯುವತಿಯು ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಟೆಕ್ಕಿಯು ಕೋಪಗೊಂಡಿದ್ದ. ಇದನ್ನೂ ಓದಿ: ದೇವದುರ್ಗದಲ್ಲಿ ಸಿಡಿಲಿಗೆ ಹೊತ್ತಿ ಉರಿದ ಬೊಲೆರೋ – ನಾಲ್ವರಿಗೆ ಗಾಯ

ಕಳೆದ 3 ದಿನಗಳ ಹಿಂದೆ ಯುವತಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೇರೊಬ್ಬ ಯುವಕನೊಂದಿಗೆ ನಿಂತಿದ್ದಳು. ಇದನ್ನೂ ಟೆಕ್ಕಿ ಗಮನಿಸಿದ್ದ. ಬೇರೊಬ್ಬ ಯುವಕನೊಂದಿಗೆ ಪ್ರೀತಿ ಇರುವುದಕ್ಕೆ ನಿರಾಕರಿಸುತ್ತಿದ್ದೀಯಾ ಎಂದು ಟೆಕ್ಕಿಯು ಯುವಕ ಯುವತಿಗೆ ಚಾಕು ಹಾಕಿದ್ದ. ಇದನ್ನೂ ಓದಿ: ಇಂದಿನಿಂದ `ಪಬ್ಲಿಕ್ ಟಿವಿ ವಿದ್ಯಾಪೀಠʼ – ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ತಪ್ಪದೇ ಬನ್ನಿ!

ನೊಂದ ಯುವತಿಯು ಟೆಕ್ಕಿಯ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ಕಾಮುಕ ಟೆಕ್ಕಿಯನ್ನು ಬಂಧನ ಮಾಡಿದ್ದಾರೆ.

Share This Article