ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

Public TV
1 Min Read

ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿರುವ ಆರೋಗ್ಯಮಾತೆಯು ಕಣ್ಣೀರು ಸುರಿಸಿದ್ದು, ಈ ವಿಸ್ಮಯವನ್ನು ನೋಡಲು ನೂರಾರು ಸಾರ್ವಜನಿಕರು ಚರ್ಚ್ ಗೆ ಆಗಮಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ದೇವರ ವಿಗ್ರಹದಲ್ಲಿ ಕಣ್ಣಿರು ಬರುತ್ತಿದ್ದು. ಹಲವು ಕುತೂಹಲಕ್ಕೆ ಕಾರಣವಾಗಿದೆ. ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚಿನ ಆರೋಗ್ಯಮಾತೆ ವಿಗ್ರಹದಿಂದ ಕಣ್ಣೀರು ಬರುತ್ತಿರುವ ಸುದ್ದಿ ಹರಡುತ್ತಲೇ, ನೂರಾರು ಭಕ್ತರು ಬಂದು ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ ಮಾತೆಗೆ ಕಣ್ಣೀರ ಬರಲು ಕಾರಣವೇನು ಎನ್ನುವ ಕುತೂಹಲ ಭಕ್ತರಲ್ಲಿ ಸೃಷ್ಟಿಯಾಗಿದೆ.

ಹರಿಹರದ ಆರೋಗ್ಯ ಮಾತಾ ಚರ್ಚ್ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಬಂದು ಮರೀಯಾ ದೇವಿಯ ದರ್ಶನ ಪಡೆದು ಹೋಗುತ್ತಾರೆ. ಆದರೆ ಬುಧವಾರ ಏಕಾಏಕಿ ಮರೀಯಾ ವಿಗ್ರಹದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿದ್ದು, ಭಕ್ತರ ಮನದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಬುಧವಾರ ಬೆಳಗ್ಗೆ 11.30ಕ್ಕೆ ಸೇಲೀನ್  ಎಂಬವರು  ಪ್ರಾರ್ಥನೆ ಸಲ್ಲಿಸಲು ಚರ್ಚಿಗೆ ಬಂದಿದ್ದಾರೆ. ಈ ವೇಳೆ ಮರೀಯಾ ವಿಗ್ರಹದಿಂದ ಕಣ್ಣೀರು ಬರುತ್ತಿರುವುದನ್ನು ಕಂಡು, ಚರ್ಚಿನ ಫಾದರ್ ಆಂತೋನಿ ಪೀಟರ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಫಾದರ್ ಅದನ್ನು ಪರೀಕ್ಷಿಸಿ ನೋಡಿದಾಗ ವಿಗ್ರಹದ ಎಡ ಭಾಗದ ಕಣ್ಣಿನಿಂದ ಕಣ್ಣೀರಿನ ಹಾಗೆ ನೀರು ತೊಟ್ಟಿಕ್ಕುತ್ತಿದೆ. ಏನಾದರೂ ಬಿದ್ದರಬಹುದೆಂದು ಫಾದರ್ ಅದನ್ನು ಒಂದು ಬಟ್ಟೆಯಿಂದ ಒರೆಸಿದ್ದಾರೆ. ಬಳಿಕ ಕೆಲ ಸಮಯದಲ್ಲಿ ಮತ್ತೆ ಅದೇ ಭಾಗದಲ್ಲಿ ನೀರು ಹರಿಯಲಾರಂಭಿಸಿದೆ ಎಂದು ಚರ್ಚ್ ಫಾದರ್ ತಿಳಿಸಿದ್ದಾರೆ.

ಮರೀಯಾ ಮಾತೆಯ ಕಣ್ಣಿನಲ್ಲಿ ನೀರು ಬರುತ್ತಿರುದನ್ನು ತಿಳಿದ ಭಕ್ತರು ಮಾತೆಯ ದರ್ಶನ ಪಡೆಯಲು ಮುಗಿದಿದ್ದಾರೆ. ಅಲ್ಲದೇ ಏನಾದರೂ ತಪ್ಪಾಗಿದೆಯೋ, ಇಲ್ಲಾ ತಾಯಿಗೆ ನೋವಾಗುವ ಹಾಗೆ ಯಾರಾದರೂ ನಡೆದುಕೊಂಡಿದ್ದಾರೆಯೋ, ಒಂದು ವೇಳೇ ಆಗೇನಾದರೂ ನಡೆದುಕೊಂಡಿದ್ದರೆ, ಅವರನ್ನು ಕ್ಷಮಿಸು ಎಂದು ಭಕ್ತರು ಪ್ರತಿಮೆಯ ಮುಂಭಾಗ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಚರ್ಚಿನ ಆಡಳಿತ ಮಂಡಳಿಯವರಾದ ಫ್ರಾನ್ಸಿಸ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *