ಯೋಧರ ವಿರುದ್ಧ ಮೀಡಿಯಾ ಪಾಟ್ನರ್ಸ್‌ಗೆ ಜಯ – ಮಾಧ್ಯಮ ತಂಡಕ್ಕೆ ಸೌಹಾರ್ದ ಕ್ರಿಕೆಟ್ ಕಪ್

Public TV
2 Min Read

ಬೆಂಗಳೂರು: ಸದಾ ದೇಶ ರಕ್ಷಣೆಯ ಕಾಯಕದಲ್ಲಿರುವ ಸೈನಿಕರು (Soldiers) ಹಾಗೂ ಬಿಡುವಿಲ್ಲದ ಕೆಲಸದಲ್ಲಿರುವ ಮಾಧ್ಯಮದವರು (Media) ಕೆಲವು ಸಮಯ ಬಿಡುವು ಮಾಡಿಕೊಂಡು ಇದೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಸೌಹಾರ್ದಯುತ ಕ್ರಿಕೆಟ್ (Cricket) ಪಂದ್ಯವನ್ನು ಆಡಿದರು. ಮೀಡಿಯಾ ಇಲೆವೆನ್ (Media X1) ಹಾಗೂ ಆರ್ಮಿ ಇಲೆವೆನ್ (Army X1) ಮಧ್ಯದ ಕ್ರಿಕೆಟ್ ಮ್ಯಾಚ್ ನಲ್ಲಿ ಮಾಧ್ಯಮ ತಂಡ ಗೆಲವು ಸಾಧಿಸಿತು.

ಮಾಣಿಕ್ ಷಾ ಪರೇಡ್ ಮೈದಾನದ ಬಳಿಯ ರಾಜೇಂದ್ರ ಸಿಂಗ್ ಜಿ ಆರ್ಮಿ ಆಫೀಸರ್ಸ್ ಇನ್ಸಿಟ್ಯೂಟ್ (RSAOI) ಮೈದಾನದಲ್ಲಿ ಶನಿವಾರ ಬೆಳಗ್ಗೆ ನಡೆದ 12 ಓವರ್ ಗಳ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಮೀಡಿಯಾ ಇಲೆವೆನ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಇದನ್ನೂ ಓದಿ: ಮೇಲುಕೋಟೆ ಬೆಟ್ಟದಲ್ಲಿ ಬಿದ್ದ ಮರ – ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ, ಶಿಕ್ಷಕರಿಗೆ ಗಂಭೀರ ಗಾಯ

ಕ್ಯಾಪ್ಟನ್ ಆಗಿ ಲೆಫ್ಟಿನೆಂಟ್ ಕರ್ನಲ್ ಜೆ.ಎಸ್.ಕಲ್ಹೋನ್ ನೇತೃತ್ವದಲ್ಲಿ ಬ್ಯಾಟಿಂಗ್ ಮಾಡಿದ ಆರ್ಮಿ ಇಲವೆನ್ ತಂಡ 12 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 107 ರನ್ ಗಳನ್ನು ಗಳಿಸಿತ್ತು. ನಂತರ ಆರ್ಮಿ ಇಲೆವೆನ್ ನೀಡಿದ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಮೀಡಿಯಾ ಇಲೆವೆನ್ ತಂಡದ ನಾಯಕ ಯಾಸಿರ್ ಮುಸ್ತಾಕ್ ನೇತೃತ್ವದಲ್ಲಿ ಅಬ್ಬರಿಸಿತು. 11.3 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 108 ರನ್ ಗಳನ್ನು ಗಳಿಸಿ ಜಯ ದಾಖಲಿಸಿತು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ: ರಮೇಶ್ ಜಾರಕಿಹೊಳಿ

ಕೇರಳ ಮತ್ತು ಕರ್ನಾಟಕ ಸಬ್ ಏರಿಯಾ ಸೇನೆಯ ಜನರಲ್ ಕಮಾಂಡಿಂಗ್ ಆಫೀಸರ್ ಆದ ಮೇಜರ್ ಜನರಲ್ ರವಿ ಮುರುಗನ್ ಗೆಲವು ಸಾಧಿಸಿದ ತಂಡಕ್ಕೆ ಟ್ರೋಫಿ ನೀಡಿದರು. ಅಲ್ಲದೆ 39 ರನ್ ಗಳನ್ನು ದಾಖಲಿಸಿದ ಆರ್ಮಿ ಇಲವೆನ್ ತಂಡದ ಲೆಫ್ಟಿನೆಂಟ್ ಕರ್ನಲ್ ಉತ್ತಮ ಬ್ಯಾಟ್ಸ್ ಮೆನ್ ಹಾಗೂ ಮೀಡಿಯಾ ಇಲವೆನ್ ತಂಡದಲ್ಲಿ ಎರಡು ವಿಕೆಟ್ ಗಳಿಸಿದ ಸುಧಾಕರ್ ಉತ್ತಮ ಬೌಲರ್ ಹಾಗೂ ತಲಾ 29 ರನ್ ಗಳನ್ನು ಗಳಿಸಿದ ಸಗಾಯ್ ರಾಜ್ ಹಾಗೂ ಮುತ್ತಪ್ಪ ಲಮಾಣಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು.

ರಕ್ಷಣಾ ಇಲಾಖೆಯ ಡೆಪ್ಯುಟಿ ಜನರಲ್ ಕಮಾಂಡಿಂಗ್ ಆಫೀಸರ್ ಬ್ರಿಗೇಡಿಯರ್ ಎಂಆರ್‌ಕೆ ಪಣಿಕ್ಕರ್, ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್ ಮರಿಯೋ ಡಿ ಮೊಂತಿ, ಕರ್ನಾಟಕ ಸಾರ್ವಜನಿಕ ಸಂಪರ್ಕಾಧಿಕಾರಿ ಪುನೀತ ಹಾಗೂ ಮಾಜಿ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಮಧು ನಾಯರ್ ಹಾಗೂ ಹಿರಿಯ ಪತ್ರಕರ್ತರು ಪಂದ್ಯದಲ್ಲಿ ಪಾಲ್ಗೊಂಡು ಎರಡು ಕಡೆಯ ಆಟಗಾರರನ್ನು ಹುರಿದುಂಬಿಸಿದರು. ಒಟ್ಟಿನಲ್ಲಿ ಈ ಸ್ನೇಹಮಯ ಪಂದ್ಯಾವಳಿ ಮಾಧ್ಯಮ ಮತ್ತು ಸೇನೆಯ ನಡುವಿನ ಉತ್ತಮ ಬಾಂಧವ್ಯಕ್ಕೆ ಕಾರಣವಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *