ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

By
1 Min Read

ಲಕ್ನೋ: ವಿಶ್ವಕಪ್‌ ಫೈನಲ್‌ (World Cup Cricket Final) ಪಂದ್ಯ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ (Rahul Gandhi) ಹೇಳಿಕೆಯ ಬಳಿಕ ಈಗ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ನರೇಂದ್ರ ಮೋದಿ ಕ್ರೀಡಾಂಗಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್ ಬದಲಿಗೆ ಲಕ್ನೋದಲ್ಲಿ ವಿಶ್ವಕಪ್‌ ಕ್ರಿಕೆಟ್‌ ಫೈನಲ್ ಪಂದ್ಯ ನಡೆದಿದ್ದರೆ  ಟೀಂ ಇಂಡಿಯಾ (Team India) ಗೆಲುತ್ತಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ಹೇಳಿಕೆ ನೀಡಿದ್ದಾರೆ.

ಇಟಾವಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,  ಲಕ್ನೋದಲ್ಲಿ ಪಂದ್ಯ ನಡೆದಿದ್ದರೆ ಟೀಂ ಇಂಡಿಯಾಕ್ಕೆ ಭಗವಾನ್ ವಿಷ್ಣು ಮತ್ತು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದ ಸಿಗುತ್ತಿತ್ತು ಎಂದು ಹೇಳಿದರು.

 

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ನಲ್ಲಿ ಕೆಲವು ಸಮಸ್ಯೆಗಳಿದ್ದು, ಇದರಿಂದಾಗಿ ಆಟಗಾರರ ಸಿದ್ಧತೆ ಅಪೂರ್ಣವಾಗಿದೆ, ಪಿಚ್‌ನಲ್ಲಿ ಕೆಲವು ಸಮಸ್ಯೆಗಳಿವೆ ಆಟಗಾರರ ಸಿದ್ಧತೆ ಅಪೂರ್ಣವಾಗಿತ್ತು ಎಂದು ನಾವು ಕೇಳಿದ್ದೇವೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಪರೋಕ್ಷವಾಗಿ ಬಿಜೆಪಿ ರಾಜಕೀಯ ಕಾರಣಕ್ಕೆ ಫೈನಲ್ ಪಂದ್ಯವನ್ನು ಅಹಮದಬಾದ್ ನಲ್ಲಿ ನಡೆಯುವಂತೆ ನೋಡಿಕೊಂಡಿದೆ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿ: ಮೋದಿ ಅಪಶಕುನ, ಐರೆನ್ ಲೆಗ್- ವಿಶ್ವಕಪ್‌ನಲ್ಲಿ ಸೋತಿದ್ದಕ್ಕೆ ಪ್ರಧಾನಿಯನ್ನು ಹೀಯಾಳಿಸಿದ ರಾಗಾ

ಲಕ್ನೋ ಸ್ಟೇಡಿಯಂಗೆ ಎಕ್ನಾ ಸ್ಟೇಡಿಯಂ ಎಂದು ಸಮಾಜವಾದಿ ಸರ್ಕಾರ ಅಧಿಕಾರದಲ್ಲಿದ್ದಾಗ ನಾಮಕರಣ ಮಾಡಿತ್ತು. ವಿಷ್ಣುವಿನ ಒಂದು ಹೆಸರು ಎಕ್ನಾ ಆಗಿದೆ.  2018ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಎಕ್ನಾ ಕ್ರಿಕೆಟ್‌ ಸ್ಟೇಡಿಯಂ ಎಂದು ಹೆಸರನ್ನು ಬದಲಾಯಿಸಿತ್ತು.

 

Share This Article