T20ಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಸೂರ್ಯ

Public TV
2 Min Read

ಗುವಾಹಟಿ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಸ್ಫೋಟಕ ಅರ್ಧ ಶತಕ ಗಳಿಸಿದ ಟೀಂ ಇಂಡಿಯಾದ (Team India) ಆಟಗಾರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅತೀ ಕಡಿಮೆ ಎಸೆತಗಳಲ್ಲಿ ಸಾವಿರ ರನ್‌ಗಳನ್ನು ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ (Australia) ವಿರುದ್ಧದ ಟಿ20 ಸರಣಿಯಲ್ಲೂ ಅಬ್ಬರಿಸಿದ ಸೂರ್ಯಕುಮಾರ್‌ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ 780 ರೇಟಿಂಗ್ಸ್ ಗಳಿಸುವ ಮೂಲಕ 3ನೇ ಸ್ಥಾನಕ್ಕೇರಿದರು. ಇದೀಗ ಕೇವಲ 18 ಎಸೆತಗಳಲ್ಲಿ 50 ರನ್‌ ಸಿಡಿಸುವ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 1,000 ರನ್‌ ಪೂರೈಸಿ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ರ‍್ಯಾಂಕಿಂಗ್‌ನಲ್ಲಿ ಫುಲ್‌ಶೈನ್ – ಪಾಕ್ ನಾಯಕನನ್ನು ಹಿಂದಿಕ್ಕಿದ SKY

ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿರುವ ಸೂರ್ಯ 573 ಎಸೆತಗಳಲ್ಲೇ 1,000 ರನ್‌ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 604 ಎಸೆತಗಳಲ್ಲಿ 1,000 ರನ್‌ ಪೂರೈಸಿದ ಗ್ಲೇನ್‌ ಮ್ಯಾಕ್ಸ್‌ವೆಲ್ (Glenn Maxwell) 2ನೇ ಸ್ಥಾನದಲ್ಲಿದ್ದಾರೆ. ಲಿನ್‌ ಮನ್ರೋ 635 ಎಸೆತಗಳಲ್ಲಿ, ಎವಿನ್‌ ಲೆವಿಸ್‌ (Evin Lewis) 640 ಎಸೆತಗಳಲ್ಲಿ ಹಾಗೂ ತಿಸಾರ ಪರೇರಾ 654 ಎಸೆತಗಳಲ್ಲಿ 1,000 ರನ್‌ ಪೂರೈಸಿ ಕ್ರಮವಾಗಿ ಮೂರು, ನಾಲ್ಕು ಹಾಗೂ 5ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 237 ರನ್‌ ಬೃಹತ್‌ ಮೊತ್ತ ಪೇರಿಸಿತು. ಈ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ 22 ಎಸೆತಗಳಲ್ಲಿ 61 ರನ್‌ (5 ಬೌಂಡರಿ, 5 ಸಿಕ್ಸರ್‌) ಚಚ್ಚಿ ಔಟಾದರು.

ಟಾಪ್-10ನಲ್ಲಿ ಸೂರ್ಯನೊಬ್ಬನೆ:
ಐಸಿಸಿ (ICC) ಟಿ20 ರ‍್ಯಾಂಕಿಂಗ್ (T20 Ranking) ಪಟ್ಟಿಯ ಟಾಪ್-10ನಲ್ಲಿ ಸೂರ್ಯಕುಮಾರ್ ಯಾದವ್ ಹೊರತುಪಡಿಸಿದ್ರೆ ಟೀಂ ಇಂಡಿಯಾದ (Team India) ಯಾರೊಬ್ಬರೂ ಸ್ಥಾನ ಪಡೆದುಕೊಂಡಿಲ್ಲ. ಆದರೆ 602 ರೇಟಿಂಗ್ಸ್ ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) 14ನೇ ಸ್ಥಾನದಲ್ಲಿದ್ದು, 591 ರೇಟಿಂಗ್ಸ್ ಹೊಂದಿರುವ ವಿರಾಟ್ ಕೊಹ್ಲಿ (Virat Kohli) 15 ರಿಂದ 16ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೆಎಲ್ ರಾಹುಲ್ 587 ರೇಟಿಂಗ್ಸ್‌ನೊಂದಿಗೆ 23 ರಿಂದ 18ನೇ ಸ್ಥಾನಕ್ಕೇರಿದ್ದರೆ, 569 ರೇಟಿಂಗ್ಸ್ ಹೊಂದಿರುವ ಇಶಾನ್ ಕಿಶನ್ 22 ರಿಂದ 23ನೇ ಸ್ಥಾನಕ್ಕೆ ಕುಸಿದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *