ಭಾರತದ ನಾಲ್ವರು ಆಟಗಾರರಿಗೆ ಕೊರೊನಾ ಸೋಂಕು ದೃಢ

Public TV
1 Min Read

ಅಹಮದಾಬಾದ್: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಅಹಮದಾಬಾದ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಭಾರತ ತಂಡದ ನಾಲ್ವರು ಆಟಗಾರರು ಹಾಗೂ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಭಾರತೀಯ ಆಟಗಾರರು ಜನವರಿ 31ರಂದು ಹಯಾತ್ ಹೋಟೆಲ್‌ನಲ್ಲಿ ತಪಾಸಣೆ ನಡೆಸಿದ್ದರು. ಜೊತೆಗೆ ಮೂರು ದಿನಗಳ ಕ್ವಾರಂಟೈನ್‌ನಲ್ಲಿದ್ದರು. ಆಗ ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್ ಹಾಗೂ ನವದೀಪ್ ಸೈನಿ ನಾಲ್ವರು ಆಟಗಾರರಿಗೆ ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾದ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಮಸಾಜರ್ ಹಾಗೂ ಭದ್ರತಾ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು 3 ಟಿ20 ಪಂದ್ಯ ಆಡಲಿದೆ. ಏಕದಿನ ಸರಣಿಯು ಫೆ. 6ರಂದು ನಡೆಯಬೇಕಿತ್ತು. ಆದರೆ ಈ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡದವರಲ್ಲಿ ಪರಿಸ್ಥಿತಿಯ ಬಗ್ಗೆ ಅವಲೋಕಿಸಿದೆ. ಸೋಂಕು ಮತ್ತಷ್ಟು ಹರಡಿದರೆ ಅದನ್ನು ಮುಂದಕ್ಕೆ ತಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ರಾಜಕೀಯ ಪುನರ್‌ ಪ್ರವೇಶಕ್ಕೆ ರೆಡ್ಡಿ ಯತ್ನ – ಅನುಮತಿ ನೀಡುತ್ತಾ ಹೈಕಮಾಂಡ್‌?

ಸದ್ಯ ಆಟಗಾರರು ಐಸೋಲೆಶನ್‌ಗೆ ಒಳಗಾಗಿದ್ದು, ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮತ್ತೊಂದು ಸುತ್ತಿನ ಕೋವಿಡ್ ಪರೀಕ್ಷೆ ಬಳಿಕ ಬಿಸಿಸಿಐ ಸರಣಿ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ವಾಜಪೇಯಿ ನಂತರ ಮೋದಿ ಬಂದಂತೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ: ಯತ್ನಾಳ್

ಫೆಬ್ರವರಿ 6ರಂದು ಏಕದಿನ ಸರಣಿಯ ಆರಂಭ ಹಾಗೂ ಫೆಬ್ರವರಿ 16ರಂದು ಟಿ20 ರಣಿಯ ಆರಂಭ ಎಂದು ಘೋಷಿಸಲಾಗಿದೆ. ಈಗಾಗಲೇ ವೆಸ್ಟ್ಇಂಡೀಸ್ ತಂಡದ ಆಟಗಾರರು ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ಜೊತೆಗೆ ಮೂರು ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *