ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

Public TV
3 Min Read

ದುಬೈ: ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಾನು ಉತ್ತಮ ಆಲ್‌ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ.

ನಿನ್ನೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಬ್ಬರಿಸುವ ಮೂಲಕ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾಕ್ಕೆ 5 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

ಕೊನೆಯ ಓವರ್‌ನಲ್ಲಿ ಟೀಂಡಿಯಾಕ್ಕೆ 7 ರನ್‌ಗಳ ಅಗತ್ಯವಿತ್ತು. ಈ ವೇಳೆ ಪಾಕ್ ಪರ ಬೌಲಿಂಗ್ ಮಾಡಿದ ಸ್ಪಿನ್ನರ್ ಮೊಹಮ್ಮದ್ ನವಾಝ್ ಮೊದಲ ಎಸೆತದಲ್ಲೇ ಆಲ್‌ರೌಂಡರ್ ರವೀಂದ್ರ ಜಡೇಜಾರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಒಂದು ರನ್ ಕದಿಯುವ ಮೂಲಕ ಪಾಂಡ್ಯಗೆ ಕ್ರೀಸ್ ಬಿಟ್ಟುಕೊಟ್ಟರು.

ಕೊನೆಯ ಓವರ್ 3ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಪ್ರಯತ್ನ ಮಾಡಿದ ಹಾರ್ದಿಕ್ ಪಾಂಡ್ಯ ಡಾಟ್‌ಬಾಲ್ ಮಾಡಿಕೊಂಡರು. ಉಳಿದ ಮೂರು ಎಸೆತಗಳಲ್ಲಿ 6 ರನ್ ಬೇಕಿದ್ದ ಟೀಂ ಇಂಡಿಯಾ ಮತ್ತಷ್ಟು ಒತ್ತಡಕ್ಕೆ ಸಿಲುಕಿತ್ತು. ಅದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಪಾಂಡ್ಯ ಬ್ಯಾಟಿಂಗ್ ಮುಂದುವರಿಸಿ, ನಾಲ್ಕನೇ ಎಸೆತವನ್ನು ಲಾಂಗ್ ಆನ್‌ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾ ಅವಿಸ್ಮರಣೀಯ ಗೆಲುವಿಗೆ ಕಾರಣರಾದ್ರು. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ

ಬಳಿಕ ಗೆಲುವಿನ ಸಂಭ್ರಮ ಹಂಚಿಕೊಂಡ ಪಾಂಡ್ಯ, ಬೌಲಿಂಗ್ ವೇಳೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲ್ ಮಾಡಬೇಕಾಗುತ್ತದೆ. ಹಾಗೆಯೇ ಶಾರ್ಟ್ ಪಿಚ್ ಮತ್ತು ಹಾರ್ಡ್ ಲೆನ್ತ್ ಬೌಲಿಂಗ್ ನನ್ನ ಸಾಮರ್ಥ್ಯ. ಇದನ್ನು ಸರಿಯಾದ ರೀತಿಯಲ್ಲಿ ಸೂಕ್ತ ಬ್ಯಾಟರ್‌ಗಳ ಎದುರು ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಅಲ್ಲದೇ ಪಾಕಿಸ್ತಾನ ವಿರುದ್ಧದ ಗೆಲುವನ್ನು ಸಂಭ್ರಮಿಸುತ್ತಿರುವ ವೇಳೆಯಲ್ಲೇ ಹಾರ್ದಿಕ್ ಪಾಂಡ್ಯ ತಮ್ಮ ಫೇಸ್‌ಬುಕ್ ಪುಟದಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದಿನ ಪಂದ್ಯವೊಂದರಲ್ಲಿ ತಾವು ಕೈಗೆ ಪೆಟ್ಟುಮಾಡಿಕೊಂಡು ಅರ್ಧಕ್ಕೆ ನಿರ್ಗಮಿಸುತ್ತಿರುವುದು ಹಾಗೂ ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪಾಕ್ ವಿರುದ್ಧ ಕಹಿ ಘಟನೆ ನೆನಪಿಸಿಕೊಂಡ ಪಾಂಡ್ಯ: 2018ರ ಏಷ್ಯಾಕಪ್ ನಲ್ಲಿ ಪಾಕ್ ವಿರುದ್ಧ ಸೆಣಸಾಡುತ್ತಿದ್ದ ವೇಳೆ ತಮ್ಮ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಕೈಗೆ ಪೆಟ್ಟುಮಾಡಿಕೊಂಡು ಅರ್ಧಕ್ಕೆ ಪಂದ್ಯದಿಂದ ನಿರ್ಗಮಿಸಿದ್ದರು. ನಿನ್ನೆ ಪಾಕ್ ವಿರುದ್ಧ ಅಬ್ಬರಿಸಿ ಗೆಲುವು ಸಾಧಿಸಿದ್ದ ಬೆನ್ನಲ್ಲೇ ಮತ್ತೊಮ್ಮೆ ಪಾಂಡ್ಯ ತಮಗಾದ ಕಹಿ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

ಇದರೊಂದಿಗೆ `ಹಿನ್ನಡೆಗಿಂತ ಪುನರ್ ಆಗಮನವೇ ಹೆಚ್ಚು’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: AsiaCup 2022: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಲಂಕಾ – ಆಫ್ಘನ್‌ಗೆ 8 ವಿಕೆಟ್‌ಗಳ ಸುಲಭ ಜಯ

ಈ ರೀತಿಯ ರನ್ ಚೇಸ್ ಮಾಡುವಾಗ ಪ್ರತಿ ಓವರ್‌ಗೆ ಪ್ರತ್ಯೇಕ ಯೋಜನೆ ಹೊಂದಿರಬೇಕಾಗುತ್ತದೆ. ಹಾಗೆಯೇ ಎದುರಾಳಿ ತಂಡದಿಂದ ಎಡಗೈ ಸ್ಪಿನ್ನರ್ ಇರುವುದು ನನಗೆ ಗೊತ್ತಿತ್ತು. ಕೊನೇ ಓವರ್‌ನಲ್ಲಿ 7 ರನ್ ಮಾತ್ರ ಗಳಿಸಬೇಕಿತ್ತು. ಒಂದು ವೇಳೆ 15 ರನ್‌ಗಳು ಬೇಕಿದ್ದರೂ ಪಂದ್ಯ ಗೆದ್ದುಕೊಡುವ ವಿಶ್ವಾಸ ನನ್ನಲ್ಲಿ ಇತ್ತು. ಏಕೆಂದರೆ ನನ್ನೆದುರು ಬೌಲಿಂಗ್ ಮಾಡುವ ಬೌಲರ್ ಸಹ ಒತ್ತಡದಲ್ಲಿ ಇರುತಾನೆ ಎಂಬುದು ನಗೆ ಗೊತ್ತಿತ್ತು ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

147 ರನ್‌ಗಳ ಗುರಿಯನ್ನು ಪಡೆದ ಭಾರತ 49.4 ಓವರ್‌ಗಳಲ್ಲಿ 148 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು. ಬೌಲಿಂಗ್‌ನಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ 35 ರನ್(17 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆಯುವ ಮೂಲಕ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *