ಬಾಗಲಕೋಟೆ: ಗಣತಿ ಕಾರ್ಯಕ್ಕೆ ಹೋದ ಶಿಕ್ಷಕಿ (Teacher) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ನಡೆದಿದೆ.
ದಾನಮ್ಮ ವಿಜಯಕುಮಾರ ನಂದರಗಿ (52) ಸಾವನ್ನಪ್ಪಿರುವ ಶಿಕ್ಷಕಿ. ಗಣತಿ ಕಾರ್ಯ (Caste Census) ಮುಗಿಸಿಕೊಂಡು ಪುತ್ರನ ಜೊತೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಮೊದಲೇ ಗಣತಿ ಕಾರ್ಯದ ತಾಂತ್ರಿಕ ಸಮಸ್ಯೆಯಿಂದಾಗಿ ಎರಡ್ಮೂರು ದಿನಗಳಿಂದ ಶಿಕ್ಷಕಿ ದಾನಮ್ಮ ಟೆನ್ಶನ್‌ನಲ್ಲಿದ್ದರು. ಹೀಗಾಗಿ ಅವರನ್ನು ಕರೆದುಕೊಂಡು ಹೋಗಲು ಮಗ ವಿಕಾಸ್ ಬೈಕ್ ತೆಗೆದುಕೊಂಡು ಬಂದಿದ್ದ. ಮಗನ ಜೊತೆ ಬರುವಾಗ ಹದಗೆಟ್ಟ ರಸ್ತೆಯಿಂದ ಬ್ಯಾಲೆನ್ಸ್ ತಪ್ಪಿ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ಶಿಕ್ಷಕಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದವರು. ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR
ಬಾಗಲಕೋಟೆಯಲ್ಲಿ ವಾಸವಿದ್ದ ಕಾರಣ ಗಣತಿ ಕಾರ್ಯ ಮುಗಿಸಿ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.