6ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ

Public TV
1 Min Read

ಜೈಪುರ: ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

ಈ ಕುರಿತಂತೆ ತನಿಖೆ ವೇಳೆ 11 ವರ್ಷದ ಬಾಲಕಿ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಮಂಗಳವಾರ ಬೆಳಗ್ಗೆ ಶಾಲೆಗೆ ಹೋದವಳು ಸಂಜೆಯಾದರೂ ಮನೆಗೆ ಹಿಂದಿರುಗದ ಕಾರಣ ಬಾಲಕಿಯ ತಾಯಿ ಶಾಲೆಯ ಬಳಿ ತೆರಳಿ ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.

POLICE JEEP

ಈ ವೇಳೆ ಬೀಗ ಹಾಕಿದ್ದ ಕೊಠಡಿಯಲ್ಲಿ ಬಾಲಕಿ ಅಳುತ್ತಿರುವ ಶಬ್ಧ ಕೇಳಿ ಬಾಗಿಲನ್ನು ಒಡೆದು ನೋಡಿದಾಗ ಮಗಳೊಂದಿಗೆ ಶಿಕ್ಷಕ ಇರುವುದನ್ನು ನೋಡಿದ್ದಾರೆ. ಈ ವೇಳೆ ಗಾಬರಿಗೊಂಡ ಶಿಕ್ಷಕ ಸ್ಥಳದಿಂದ ಓಡಿಹೋಗಿದ್ದಾನೆ. ಇದನ್ನೂ ಓದಿ: ಅದು ಮೇಕೆದಾಟಲ್ಲ, ಮೇಕೆ ನಾಟಕ ಪಾದಯಾತ್ರೆ: ಮುನಿರತ್ನ

ನಂತರ ಬಾಲಕಿ ನಡೆದ ಘಟನೆಯನ್ನು ತಾಯಿ ಬಳಿ ಹೇಳಿಕೊಂಡಿದ್ದು, ನಂತರ ಪೋಷಕರು ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಗುರುವಾರ ಪೊಲೀಸರು ಬಂದಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಮೂರು ತಿಂಗಳಿನಲ್ಲಿ ರಾಜಸ್ಥಾನದ ಶಾಲೆಗಳಲ್ಲಿ ನಾಲ್ಕು ಬಾಲಕಿಯರ ಮೇಲೆ ಅತ್ಯಾಚಾರ ವೆಸಗಿರುವ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆಗೆ ಕ್ಯಾಬಿನೆಟ್‍ನಲ್ಲಿ ಖಾಯಂ ಸ್ಥಾನ ಕೊಟ್ಟ ಗೋವಾ ಸರ್ಕಾರ

Share This Article
Leave a Comment

Leave a Reply

Your email address will not be published. Required fields are marked *