ಪ್ರವಾಹದ ನೀರಿಗೆ ಬಟ್ಟೆ ಒದ್ದೆಯಾಗುತ್ತೆ ಅಂತಾ ವಿದ್ಯಾರ್ಥಿಗಳಿಂದ ಕುರ್ಚಿ ಹಾಕಿಸಿಕೊಂಡ ಶಿಕ್ಷಕಿ

Public TV
1 Min Read

ಲಕ್ನೋ: ಶಾಲಾ ಶಿಕ್ಷಕಿಯೊಬ್ಬಳು ಕಾಲು ಒದ್ದೆ ಆಗುತ್ತೆ ಎಂದು ವಿದ್ಯಾರ್ಥಿಗಳ ಬಳಿ ಪ್ಲಾಸ್ಟಿಕ್ ಕುರ್ಚಿಗಳನ್ನು ಹಾಕಿಸಿ ಅದರ ಮೇಲೆ ಏರಿ ಶಾಲೆಗೆ ಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಶಾಲೆಯ ಸುತ್ತಲೂ ನೀರು ತುಂಬಿದೆ. ಈ ನೀರು ಸುಮಾರು ಮೊಣಕಾಲಿನವರೆಗೆ ಬರುವುದರಿಂದ ಶಾಲೆಯೊಳಗೆ ಹೋಗಲು ಕಾಲು ಹಾಗೂ ಬಟ್ಟೆ ಒದ್ದೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕಿಯೊಬ್ಬಳು ಶಾಲೆಗೆ ಹೋಗಲು ನೀರು ತುಂಬಿದ್ದ ಜಾಗದಲ್ಲಿ ಅಲ್ಲಿನ ವಿದ್ಯಾರ್ಥಿಗಳ ಬಳಿ ಪ್ಲಾಸ್ಟಿಕ್ ಕುರ್ಚಿಯನ್ನು ಜೋಡಿಸಲು ಹೇಳಿದ್ದಾಳೆ.

ಇದಾದ ಬಳಿಕ ಆ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಶಿಕ್ಷಕಿ ಬರುತ್ತಿದ್ದಾಳೆ. ಅವಳು ಒಂದು ಕುರ್ಚಿಯಿಂದ ಮತ್ತೊಂದು ಕುರ್ಚಿಗೆ ದಾಟಲು ಅಲ್ಲಿಯ ವಿದ್ಯಾರ್ಥಿಗಳೇ ಸಹಾಯ ಮಾಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಬೇರೊಬ್ಬ ಶಿಕ್ಷಕಿಯು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದೆ ಅಂಗಡಿಗೆ ಮುತ್ತಿಗೆ

ಈ ವೀಡಿಯೋ ಇದೀಗ ವೈರಲ್ ಆಗುತ್ತಿದ್ದಂತೆ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಯನ್ನು ತನ್ನ ಕೆಲಸಕ್ಕಾಗಿ ಬಳಸಿಕೊಂಡಿದ್ದ ಹಾಗೂ ಶಿಕ್ಷಕಿಯ ಈ ಅತಿರೇಕದ ವರ್ತನೆಗೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *