ತುಮಕೂರು | ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ ಸಾವು

Public TV
1 Min Read

ತುಮಕೂರು: ಬೀದಿ ದೀಪ (Street Light) ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ (Teacher) ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

ಗುಬ್ಬಿ ತಾಲೂಕಿನ ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಟ್ಟೂರು ಗ್ರಾಮದ ಲೋಕೇಶ್ ರಾವ್ (35) ವಿದ್ಯುತ್ ಸ್ಪರ್ಶಿಸಿ ಸೋಮವಾರ ಮೃತಪಟ್ಟಿದ್ದಾರೆ. ಬೆಳಗ್ಗೆ ಮನೆ ಸಮೀಪದ ಬೀದಿ ದೀಪ ಆರಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: Chamarajanagar | ಕೌಟುಂಬಿಕ ಕಲಹ – 2 ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಬೀದಿ ದೀಪಗಳಿಗೆ ಅಳವಡಿಸಿರುವ ವೈರ್‌ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ  ತಿಳಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಸ್ವಿಚ್ ಅಳವಡಿಸುವುದಕ್ಕೆ ಬದಲಾಗಿ ವೈರನ್ನೇ ಒಂದಕ್ಕೊಂದು ಸ್ಪರ್ಶಿಸಿ ಇಟ್ಟಿರುವುದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್

ಮೃತರು ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಒಂದು ತಿಂಗಳ ಮಗುವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ಸ್ವಗ್ರಾಮದಲ್ಲಿ ನೆರವೇರಿತು. ಇದನ್ನೂ ಓದಿ: ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್

Share This Article