ಶಿಸ್ತು ಕಾಪಾಡಲು ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಶಿಕ್ಷಕಿ – ಶಾಲೆಯಿಂದ ವಜಾ

Public TV
1 Min Read

ಲಕ್ನೋ: ವಿದ್ಯಾರ್ಥಿಗಳು (Students) ಶಿಸ್ತಿನಿಂದಿರಲು ಅವರ ಕೂದಲನ್ನು (Hair) ತಾನೇ ಕತ್ತರಿಸಿದ ಶಿಕ್ಷಕಿಯನ್ನು (Teacher) ಶಾಲೆಯಿಂದ ವಜಾಗೊಳಿಸಿರುವ ಘಟನೆ ನೋಯ್ಡಾದ (Noida) ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಸೆಕ್ಟರ್ 168ರಲ್ಲಿರುವ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯ ಶಿಸ್ತು ಪ್ರಭಾರಿ ಸುಷ್ಮಾ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳಿಗೆ ತಮ್ಮ ಕೂದಲನ್ನು ಟ್ರಿಮ್ ಮಾಡಿಕೊಂಡು ಬರುವಂತೆ ಹೇಳಿದ್ದರು. ಆದರೆ ಯಾರೂ ಶಿಕ್ಷಕಿಯ ಮಾತು ಕೇಳದ ಹಿನ್ನೆಲೆ ಬುಧವಾರ ಶಿಕ್ಷಕಿಯೇ ಸುಮಾರು 15 ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಿಲ್ಲದೆ ಒಣಗುತ್ತಿರೋ ಬೆಳೆ- ಜಾನುವಾರು ಬಿಟ್ಟು ಬೆಳೆ ತಿನ್ನಿಸಿದ ರೈತರು

ಘಟನೆ ಬೆಳಕಿಗೆ ಬರುತ್ತಲೇ ವಿದ್ಯಾರ್ಥಿಗಳ ಪೋಷಕರು ಶಾಲೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಲು ನಿರ್ಧರಿಸಿದೆ. ಇದನ್ನೂ ಓದಿ: ಕಳ್ಳತನಕ್ಕಿಳಿದು ಸಿಕ್ಕಿಬಿದ್ದ ಸೈಕಲ್‍ನಲ್ಲೇ ದೇಶ ಸುತ್ತಿ HIV ಬಗ್ಗೆ ಜಾಗೃತಿ ಮೂಡಿಸ್ತಿದ್ದ ವ್ಯಕ್ತಿ

Share This Article