ಬೆಂಗಳೂರು: ವಸ್ತು ಖರೀದಿಸಿದ ಗ್ರಾಹಕರಿಗೆ ಬಿಲ್ ಕೊಡದೆ ಸರ್ಕಾರಕ್ಕೆ ಯಾಮಾರಿಸ್ತಿದ್ದ ಗ್ಯಾಂಗ್ಗಳಿಗೆ ತೆರಿಗೆ ಇಲಾಖೆ ಜಿಎಸ್ಟಿ ಶಾಕ್ ನೀಡಿದೆ.
ಸಿಲಿಕಾನ್ ಸಿಟಿಯ ಚಿಕ್ಕಪೇಟೆಯಲ್ಲಿ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ವರ್ತಕರು ಮತ್ತು ವ್ಯಾಪಾರಿಗಳಿಗೆ 1.42 ಕೋಟಿ ರೂಪಾಯಿ ತೆರಿಗೆ ದಂಡ ವಿಧಿಸಿದ್ದಾರೆ. ದಾಳಿಯ ವೇಳೆಯಲ್ಲಿ ಬಚ್ಚಿಟ್ಟಿದ್ದ ವಹಿವಾಟನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರ ಜೊತೆಗೆ 3 ಕೋಟಿ ರೂಪಾಯಿ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ತೆರಿಗೆ ಅಧಿಕಾರಿಗಳು ಮತ್ತೊಂದು ಅಕ್ರಮವನ್ನೂ ಬಯಲು ಮಾಡಿದ್ದಾರೆ. ಬೆಳ್ಳಿ ವ್ಯಾಪಾರಸ್ಥರಿಗೆ ಸೇರಿದ ಮೂರು ಗೋದಾಮಿನ ಮೇಲೆ ದಾಳಿ ಮಾಡಿ, ಬರೋಬ್ಬರಿ 8 ಕೋಟಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ನಗರದ ಬೇರೆ ಭಾಗಗಳಲ್ಲಿಯೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವನ್ನು ಬಯಲಿಗೆಳೆಯಲಿದ್ದಾರೆ.