ಪನೀರ್ನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ದೇಹದ ಸ್ನಾಯುಗಳು ಬಲವಾಗುತ್ತವೆ. ಜೊತೆಗೆ ಪನೀರ್ ದೇಹಕ್ಕೆ ಶಕ್ತಿ ನೀಡುವ ಆಹಾರವಾಗಿದ್ದು, ಮಕ್ಕಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪನೀರ್ ಪಕೋಡ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಸಂಜೆ ಟೀ ಜೊತೆ ಪನೀರ್ ಪಕೋಡ ಪರ್ಫೆಕ್ಟ್ ಕಾಂಬಿನೇಷನ್. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಪನೀರ್ – 250 ಗ್ರಾಂ
ಕಡಲೆಹಿಟ್ಟು – 1 ಕಪ್
ಅಕ್ಕಿಹಿಟ್ಟು – ಕಾಲು ಕಪ್
ಕೆಂಪು ಮೆಣಸಿನ ಪುಡಿ – 1 ಚಮಚ
ಅರಿಶಿನ ಪುಡಿ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಗರಂ ಮಸಾಲ – ಕಾಲು ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಕರಿಯಲು ಅಗತ್ಯವಿರುವಷ್ಟು
ನೀರು – ಮಿಶ್ರಣಕ್ಕೆ ಬೇಕಾದಷ್ಟು
ಮಾಡುವ ವಿಧಾನ:
*ಮೊದಲು ಪನೀರ್ ಅನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಬೇಕು.
*ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ನೀರನ್ನು ನಿಧಾನವಾಗಿ ಸೇರಿಸುತ್ತಾ ದಪ್ಪವಾಗಿರುವ ಪೇಸ್ಟ್ ತಯಾರಿಸಬೇಕು.
*ಈಗ ಪನೀರ್ ತುಂಡುಗಳನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಬಾಣಲೆಯಲ್ಲಿ ಬಿಸಿ ಮಾಡಿದ ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಎರಡೂ ಬದಿ ಗೋಲ್ಡನ್ ಕಲರ್ ಬರುವವರೆಗೆ ಕರಿಯಬೇಕು.
*ನಂತರ ಪನೀರ್ ಪಕೋಡವನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಳ್ಳಿ.
*ಹಸಿಮೆಣಸಿನ ಚಟ್ನಿ ಅಥವಾ ಟೊಮ್ಯಾಟೊ ಸಾಸ್ ಜೊತೆ ಸವಿಯುವುದರಿಂದ ಪನೀರ್ ಪಕೋಡ ರುಚಿ ಇನ್ನಷ್ಟು ಹೆಚ್ಚುತ್ತದೆ.