ಮನೆಯಲ್ಲೇ ತಯಾರಿಸಿ ಟೇಸ್ಟಿ ಬೀಟ್‌ರೂಟ್ ವಡೆ

Public TV
1 Min Read

ಬೀಟ್‌ರೂಟ್ ಸೇವನೆಯು ರಕ್ತಹೀನತೆಯನ್ನು ತಡೆಯುವುದು, ಹೃದಯದ ಆರೋಗ್ಯ ಕಾಪಾಡುವುದು, ಜೀರ್ಣಕ್ರಿಯೆ ಸುಧಾರಿಸುವುದು ಮುಂತಾದ ಅನೇಕ ಲಾಭಗಳನ್ನು ನೀಡುತ್ತದೆ. ಇನ್ನೊಂದೆಡೆ, ಉದ್ದಿನ ಬೇಳೆಯಿಂದ ತಯಾರಿಸುವ ವಡೆಗಳು ಪ್ರೋಟೀನ್ ಮತ್ತು ಶಕ್ತಿಯನ್ನು ಒದಗಿಸುತ್ತವೆ. ಈ ಎರಡನ್ನೂ ಸೇರಿಸಿ ಮಾಡುವ ಬೀಟ್‌ರೂಟ್ ಕ್ರಿಸ್ಪಿ ವಡೆಗಳು ಆರೋಗ್ಯಕರವಾಗಿರುವುದರ ಜೊತೆಗೆ ತಿನ್ನಲು ಅತ್ಯಂತ ರುಚಿಕರವಾಗಿರುತ್ತವೆ. ಈ ರೆಸಿಪಿ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರಿಗೂ ಇಷ್ಟವಾಗುವಂತಹದು. ಚಹಾ ಸಮಯದಲ್ಲಿ ಸವಿಯಲು ಇದು ಒಳ್ಳೆಯ ಆಯ್ಕೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು:
ಉದ್ದಿನ ಬೇಳೆ – 2 ಕಪ್
ತುರಿದ ಬೀಟ್‌ರೂಟ್ – 1
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಹಸಿರು ಮೆಣಸು – 2
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ಇಡ್ಲಿ ಸೋಡಾ – ಸ್ವಲ್ಪ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲು ಉದ್ದಿನ ಬೇಳೆಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ನೀರು ಹಾಕದೆ ಮಿಕ್ಸಿಯಲ್ಲಿ ಹಾಕಿ ಮೃದುವಾದ ಹಿಟ್ಟಿನಂತೆ ಮಾಡಿಕೊಳ್ಳಿ.
* ಒಂದು ದೊಡ್ಡ ಪಾತ್ರೆಯಲ್ಲಿ ಈ ಉದ್ದಿನ ಬೇಳೆಯ ಹಿಟ್ಟಿಗೆ ನುಣ್ಣಗೆ ತುರಿದ ಬೀಟ್‌ರೂಟ್ ಸೇರಿಸಿ.
* ನಂತರ ಉಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ವಡೆಗಳನ್ನು ಹೆಚ್ಚು ಗರಿಗರಿಯಾಗಿಸಬೇಕಾದರೆ ಸ್ವಲ್ಪ ಇಡ್ಲಿ ಸೋಡಾ ಹಾಕಬಹುದು.
* ಒಂದು ಕಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಕಾದ ಬಳಿಕ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳಂತೆ ಮಾಡಿ, ಕೈಯಲ್ಲಿ ಒತ್ತಿ ವಡೆಗಳ ಆಕಾರ ನೀಡಿ.
* ಬಿಸಿ ಎಣ್ಣೆಯಲ್ಲಿ ಇವುಗಳನ್ನು ಹಾಕಿ, ಬಂಗಾರದ ಬಣ್ಣ ಬರುವವರೆಗೆ ಎರಡೂ ಬದಿಗಳಿಂದ ಹುರಿಯಿರಿ.
* ಬಳಿಕ ಎಣ್ಣೆಯಿಂದ ವಡೆ ತೆಗೆದು ಪ್ಲೇಟ್‌ಗೆ ಹಾಕಿ ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸವಿಯಿರಿ.

Share This Article