ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

Public TV
1 Min Read

ಮಂಗಳೂರು: ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಳ್ಳುವ ಆಡಿಯೋ ಈಗ ವೈರಲ್ ಆಗಿದೆ.

ಮೊನ್ನೆ ಶನಿವಾರ ಬೆಳಗ್ಗೆ ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ಆಗಂತುಕರಿಬ್ಬರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಟಾರ್ಗೆಟ್ ಗ್ಯಾಂಗಿನಲ್ಲಿ ಒಂದು ಕಾಲದಲ್ಲಿ ಒಟ್ಟಿಗಿದ್ದವರೇ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು.

ಇಲ್ಯಾಸ್ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಉಳ್ಳಾಲ ಭಾಗದಲ್ಲಿ ಸಕ್ರಿಯವಾಗಿದ್ದರಿಂದ ಮುಸ್ಲಿಂ ಯುವಕರ ಬೆಂಬಲಗಳಿಸಿದ್ದ. ಇದೀಗ ಮಂಗಳೂರು ಮುಸ್ಲಿಮರ ಆಡು ಭಾಷೆ ಬ್ಯಾರಿ ಭಾಷೆಯಲ್ಲಿರುವ ಆಡಿಯೋದಲ್ಲಿ ಇಲ್ಯಾಸ್ ಹಂತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇಷ್ಟೇ ಅಲ್ಲದೆ ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡುವುದಿಲ್ಲ. ಮಲಗಿದ ಹೆಣಕ್ಕೆ ಹೊಡೆದು ಸಾಯಿಸಿದ್ದರಲ್ಲ. ಬಿಡುವುದಿಲ್ಲ. ನಿಮ್ಮನ್ನೂ ನಾಯಿ ಕೊಂದ ಹಾಗೆ ಕೊಲ್ತೀವಿ. ಯಾರನ್ನೂ ಉಳಿಸುವುದಿಲ್ಲ ಅಂತ ಇಲ್ಯಾಸ್ ಗೆಳೆಯನೊಬ್ಬ ಹೇಳುತ್ತಿರುವ ಆಡಿಯೋ ಈಗ ಮುಸ್ಲಿಂ ವಾಟ್ಸಪ್ ಗ್ರೂಪ್ ಗಳಲ್ಲಿ ಭಾರೀ ವೈರಲ್ ಆಗಿದೆ. ಇಲ್ಯಾಸ್ ನೇತೃತ್ವದ ಟಾರ್ಗೆಟ್ ಗ್ಯಾಂಗ್ ಸಕ್ರಿಯವಾಗಿತ್ತು ಎಂಬುದಕ್ಕೆ ಅವರೇ ಮಾಡಿಕೊಂಡಿದ್ದ ಎಕ್ಸ್ ಕ್ಲೂಸಿವ್ ವಿಡಿಯೋಗಳು ಲಭ್ಯವಾಗಿದೆ.

https://www.youtube.com/watch?v=2zDo8oHyHWI

https://www.youtube.com/watch?v=nu7UjCAWt8o

Share This Article
Leave a Comment

Leave a Reply

Your email address will not be published. Required fields are marked *