ಬೇಸಿಗೆಯಲ್ಲಿ ಚುಮುಚುಮು ಚಳಿ ಎಂದ ತಾನ್ಯ ಹೋಪ್ : ‘ಕಬ್ಜ’ದಲ್ಲಿ ಹಾಟ್ ಹಾಟ್

Public TV
1 Min Read

ಬಸಣ್ಣಿ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದ ನಟಿ ತಾನ್ಯ ಹೋಪ್ (Tanya Hope), ಇದೀಗ ಕಬ್ಜ (Kabzaa) ಸಿನಿಮಾದ ಹಾಡಿನಲ್ಲಿ ಇನ್ನೂ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ‘ಚುಮು ಚುಮು ಚಳಿ’ (Chalichali) ಎನ್ನುವ ಹಾಡಿನಲ್ಲಿ ಉಪೇಂದ್ರ (Upendra) ಜೊತೆ ಸಖತ್ ಸ್ಟೆಪ್ ಹಾಕಿರುವ ಅವರು, ಪಡ್ಡೆ ಹುಡುಗರಿಗೆ ಬಿಸಿ ಬಿಸಿ ತಾಗಿಸಿದ್ದಾರೆ. ತಾನ್ಯ ಹೋಪ್ ಜೊತೆ ಉಪ್ಪಿ ಕೂಡ ಮಜವಾಗಿ ಡಾನ್ಸ್ ಮಾಡಿದ್ದು ವಿಶೇಷ. ರವಿ ಬಸರೂರು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ.

ನಿನ್ನೆ ಶಿಡ್ಲಘಟ್ಟದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ಹಾಡನ್ನು ರಿಲೀಸ್ ಮಾಡಿದ್ದು, ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಚಿತ್ರತಂಡ ಮೊದಲೇ ಘೋಷಿಸಿದಂತೆ ಸಾವಿರಾರು ಜನರ ಮಧ್ಯ ಈ ಹಾಡಿನ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಸಂಗೀತ, ನೃತ್ಯ ಕಾರ್ಯಕ್ರಮಗಳು ಮತ್ತಷ್ಟು ಮೆರಗು ನೀಡಿದ್ದು ವಿಶೇಷ. ಇದನ್ನೂ ಓದಿ: ಪೃಥ್ವಿ ಶಾ ಯಾರು ಅಂತಾನೇ ಗೊತ್ತಿಲ್ಲ, ಆತ ಕುಡಿದು ಬಂದಿದ್ದ – ಸಪ್ನಾ ಗಿಲ್

ಆರ್.ಚಂದ್ರು ನಿರ್ದೇಶನದಲ್ಲಿ ಕಬ್ಜ ಸಿನಿಮಾ ಮೂಡಿ ಬಂದಿದ್ದು, ಉಪೇಂದ್ರ ಮತ್ತು ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ಈ ಕಾಂಬಿನೇಷನ್ ಜೊತೆ ಶ್ರೀಯಾ ಶರಣ್ ನಾಯಕಿಯಾಗಿ ನಟಿಸಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಿದ್ದು, ಈಗಾಗಲೇ ನೋಡುಗರಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ. ಈ ವರ್ಷದ ಅತೀ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ.

ಹಲವು ಅಚ್ಚರಿಗಳನ್ನು ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕ ಚಂದ್ರು. ಹೆಸರಾಂತ ತಾರಾಬಳಗ ಕೂಡ ಈ ಸಿನಿಮಾದಲ್ಲಿದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಗೆ ಸಲ್ಲುವಂತೆ ಕಲಾವಿದರ ಆಯ್ಕೆ ಮಾಡಿದ್ದಾರಂತೆ. ಹಾಗಾಗಿ ಇದೊಂದು ಭಾರತೀಯ ಸಿನಿಮಾ ಎನ್ನುತ್ತಾರೆ ನಿರ್ದೇಶಕರು. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮತ್ತು ಟೀಸರ್ ಅಪಾರ ಮೆಚ್ಚುಗೆ ಪಡೆದಿವೆ.

Share This Article
Leave a Comment

Leave a Reply

Your email address will not be published. Required fields are marked *