ದಿಢೀರ್ ಬಾಯ್ತೆರೆದ ರಸ್ತೆ – ಮುಳುಗಿತು ನೀರಿನ ಟ್ಯಾಂಕರ್

Public TV
1 Min Read

ಪುಣೆ: ಮಹಾನಗರ ಪಾಲಿಕೆಯ ನೀರಿನ ಟ್ಯಾಂಕರ್  ರಸ್ತೆಯಲ್ಲೇ ಮುಳುಗಿದ ಘಟನೆ ಪುಣೆಯಲ್ಲಿ (Pune) ನಡೆದಿದೆ.

ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ. ಟ್ಯಾಂಕರ್ ಸಾಗುತ್ತಿದ್ದಾಗ ರಸ್ತೆ ದಿಢೀರ್ ಕುಸಿದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಲಿಲ್ಲ. ಗುಂಡಿಯೊಳಗೆ ಬಿದ್ದಿರುವ ಟ್ಯಾಂಕರ್‌ನಿಂದ ಚಾಲಕ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆ. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಂದಿನಿ ತುಪ್ಪ ಕಡ್ಡಾಯ: ಮುಜುರಾಯಿ ಇಲಾಖೆ ಆದೇಶ

ಸ್ಥಳೀಯರು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಈ ರೀತಿಯ ಘಟನೆ ನಡೆಯಬಾರದು. ಆದಷ್ಟು ಬೇಗ ರಸ್ತೆ ದುರಸ್ತಿಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

Share This Article