ಸಂತೋಷ್‌ ಜೊತೆ ಮದುವೆ ನಂತರ ನಿಮ್ಮ ಪರಿಸ್ಥಿತಿ ಏನು? ತನಿಷಾಗೆ ಕಾಲೆಳೆದ ನಮ್ರತಾ

Public TV
1 Min Read

ರ್ತೂರು ಸಂತೋಷ್ ಮದುವೆ ಆಗಿರುವ ಪ್ರಸಂಗ ಮನೆ ಹೊರಗೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ರೆ, ಇತ್ತ ಮನೆಯೊಳಗೆ ತನಿಷಾ- ಸಂತೋಷ್ ಲವ್ವಿ ಡವ್ವಿ ಜೋರಾಗಿ ನಡೆಯುತ್ತಿದೆ. ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ಕಣ್ರೋ ಅಂದ್ರು ನಮ್ರತಾ ಬಿಟ್ಟು ಬಿಡದೇ ವರ್ತೂರು ಸಂತೋಷ್ (Varthur Santhosh) ಹೆಸರು ಹೇಳಿ ತನಿಷಾರ (Tanisha Kuppanda) ಕಾಲೆಳೆದಿದ್ದಾರೆ.

ದೊಡ್ಮನೆಗೆ ನಿನ್ನೆ ಸಂತೋಷ್ ಅವರ ತಾಯಿ ಎಂಟ್ರಿ ಕೊಟ್ಟಿದ್ದರು. ಆಗ ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತೀನಿ ಎಂದು ಪಟ್ಟು ಹಿಡಿದಿದ್ದ ಸಂತೋಷ್‌ಗೆ ಬುದ್ಧಿ ಹೇಳಿ ಮನವಿ ಮಾಡಿದ್ದರು. ಈ ವೇಳೆ, ಅವರ ಸಂಭಾಷನೆ ಕೇಳಿ ನಮ್ರತಾ (Namratha Gowda) ಅಚ್ಚರಿ ಪಟ್ಟಿದ್ದಾರೆ. ಯಾವ ಭಾಷೆ ಇದು ಅರ್ಥನೇ ಆಗ್ತಿಲ್ಲ ಕೇಳೋಕೆ ವಿಚಿತ್ರವಾಗಿದೆ ಎಂದು ತನಿಷಾ ಬಳಿ ಹೇಳಿದ್ದಾರೆ.

ಅದಕ್ಕೆ ತನಿಷಾ, ಅದು ಅವರ ಆಡು ಭಾಷೆ ಕನ್ನಡ, ತೆಲುಗು, ತಮಿಳು ಮಿಕ್ಸ್ ಆಗಿದೆ ಎಂದಿದ್ದಾರೆ. ಅದಕ್ಕೆ ಅದು ಅರ್ಥವೇ ಆಗೋದಿಲ್ಲ ಎಂದು ಮಾತನಾಡಿದ್ದಾರೆ. ಅದಕ್ಕೆ, ಹೀಗಾದ್ರೆ ಮುಂದೆ ಹೇಗೆ? ಮದುವೆ ಆಗಿ ಅವರ ಮನೆಗೆ ಹೋದರೆ ಪರಿಸ್ಥಿತಿ ಏನು ಎಂದು ತನಿಷಾಗೆ ಕಾಲೆಳೆದಿದ್ದಾರೆ ನಮ್ರತಾ. ಯೇ ಹೋಗೇ ಎಂದಷ್ಟೇ ಹೇಳಿ ನಕ್ಕಿದ್ದಾರೆ. ಇದನ್ನೂ ಓದಿ:ನಟಿ ರಶ್ಮಿಕಾ ಡೀಪ್‍ಫೇಕ್ ವೀಡಿಯೋ ಪ್ರಕರಣ – ಯುವಕನ ವಿಚಾರಣೆ

ಮೊದಲಿಗೆ ತಮಾಷೆಯಿಂದ ಕೂಡಿರೋ ಈ ಮಾತುಗಳು ಮುಂದಿನ ದಿನಗಳಲ್ಲಿ ನಿಜ ಆಗುತ್ತಾ? ನೋ ಎಂದವರೇ ಆಮೇಲೆ ಜೋಡಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿರೋದು ಇದೆ. ವರ್ತೂರು ಸಂತೋಷ್- ತನಿಷಾ ಗಾಸಿಪ್‌ಗೆ ಸೀಮಿತವಾಗದೇ ಜೊತೆಯಾಗುತ್ತಾರಾ? ಕಾಯಬೇಕಿದೆ.

Share This Article