ಕರಿ ಎಳ್ಳಿನ ಡಂಪ್ಲಿಂಗ್ – ಇದು ಚೈನೀಸ್ ಸ್ವೀಟ್

Public TV
2 Min Read

ರಿ ಎಳ್ಳನ್ನು ಬಳಸಿ ಚೈನೀಸ್ ಸ್ಟೈಲ್‌ನ ಸಿಹಿ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡಲಿದ್ದೇವೆ. ಡಂಪ್ಲಿಂಗ್ ಎನ್ನಲಾಗುವ ಈ ಸಿಹಿ ಚೀನಾದ ಫೇಮಸ್ ಡಿಶ್. ಇದನ್ನು ಟ್ಯಾಂಗ್ ಯುವಾನ್ ಎಂತಲೂ ಕರೆಯಲಾಗುತ್ತದೆ. ಬಿಸಿ ನೀರು ಅಥವಾ ಶುಂಠಿಯ ಸಿರಪ್‌ನಲ್ಲಿ ಅದ್ದಿ, ಈ ಡಂಪ್ಲಿಂಗ್ ಅನ್ನು ಬಡಿಸಲಾಗುತ್ತದೆ. ಮಳೆ ಅಥವಾ ತಣ್ಣಗಿನ ದಿನಗಳಲ್ಲಿ ಬೆಚ್ಚಗಿನ ಸಿಹಿ ಸವಿಯಲು ಆಹ್ಲಾದಕರವಾಗಿರುತ್ತದೆ. ಹಾಗಿದ್ರೆ ಟ್ಯಾಂಗ್ ಯುವಾನ್ ಮಾಡೋದು ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಜಿಗುಟಾದ ಅಕ್ಕಿ ಹಿಟ್ಟು – 250 ಗ್ರಾಂ
ನೀರು – 180 ಮಿ.ಲೀ.
ಕರಿ ಎಳ್ಳು – ಕಾಲು ಕಪ್
ಸಕ್ಕರೆ – ಕಾಲು ಕಪ್
ಬೆಣ್ಣೆ – ಕಾಲು ಕಪ್
ಶುಂಠಿ ಸಿರಪ್ ತಯಾರಿಸಲು:
ನೀರು – 5 ಕಪ್
ಸಕ್ಕರೆ – 1 ಕಪ್
ಸಿಪ್ಪೆ ತೆಗೆದು ಕತ್ತರಿಸಿದ ಶುಂಠಿ – 100 ಗ್ರಾಂ ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ

ಮಾಡುವ ವಿಧಾನ:
* ಮೊದಲಿಗೆ ಕರಿ ಎಳ್ಳನ್ನು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಎಳ್ಳು ಬಿಸಿಯಾದಾಗ ಸಿಡಿಯುತ್ತದೆ. ಇದಕ್ಕಾಗಿ ಬಾಣಲೆಗೆ ಮುಚ್ಚಳ ಬಳಸಿ. ಎಳ್ಳು ಸುಡದಂತೆ ಜಾಗ್ರತೆವಹಿಸಿ.
* ಎಳ್ಳು ಸುವಾಸನೆ ಬರಲು ಪ್ರಾರಂಭವಾಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ ತಕ್ಷಣ ಅದನ್ನು ಇನ್ನೊಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
* ಬಳಿಕ ಒಂದು ಬ್ಲೆಂಡರ್ ಬಳಸಿ ಅದರಲ್ಲಿ ಎಳ್ಳನ್ನು ಪುಡಿ ಮಾಡಿಕೊಳ್ಳಿ.
* ನಂತರ ಅದನ್ನು ಬಾಣಲೆಗೆ ವರ್ಗಾಯಿಸಿ, ಸಕ್ಕರೆ ಮತ್ತು ಬೆಣ್ಣೆ ಬೆರೆಸಿ ದಪ್ಪಗಿನ ಪೇಸ್ಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ಬೆಣ್ಣೆ ಸೇರಿಸಬಹುದು.
* ಬಳಿಕ ಈ ಮಿಶ್ರಣವನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿ.
* ಈಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು ಅದರಲ್ಲಿ ಅಂಟು ಅಕ್ಕಿ ಹಿಟ್ಟನ್ನು ಹಾಕಿ ನಿಧಾನಕ್ಕೆ ನೀರನ್ನು ಬೆರೆಸುತ್ತಾ ಮಿಶ್ರಣ ಮಾಡಿಕೊಳ್ಳಿ. ಇದರಲ್ಲಿ ಸುಮಾರು 15-20 ಉಂಡೆಗಳಾಗುವಂತೆ ವಿಭಜಿಸಿ, ನಿಮ್ಮ ಅಂಗೈ ಸಹಾಯದಿಂದ ಉಂಡೆಯನ್ನು ಚಪ್ಪಟೆಗೊಳಿಸಿ.
* ಈಗ ಎಳ್ಳಿನ ಪೇಸ್ಟ್ ಅನ್ನು ಒಂದೊಂದೇ ಚಮಚದಷ್ಟು ಚಪ್ಪಟೆಗೊಳಿಸಿದ ಹಿಟ್ಟಿನ ಮೇಲೆ ಹಾಕಿ, ಹಿಟ್ಟಿನ ಅಂಚುಗಳನ್ನು ಮಧ್ಯಕ್ಕೆ ತಂದು ಜೋಡಿಸಿ. ಎರಡೂ ಅಂಗೈಗಳನ್ನು ಬಳಸಿ ಮೃದುವಾಗಿ ಚೆಂಡಿನಾಕಾರಕ್ಕೆ ತನ್ನಿ. ಎಲ್ಲ ಹಿಟ್ಟನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
* ಶುಂಠಿ ಸಿರಪ್ ತಯಾರಿಸಲು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಅದಕ್ಕೆ ಶುಂಠಿ ತುಂಡುಗಳನ್ನು ಹಾಕಿ, ಸುಮಾರು 10-15 ನಿಮಿಷ ಕುದಿಸಿಕೊಳ್ಳಿ.
* ಸಕ್ಕರೆ ಸೇರಿಸಿ ಮತ್ತೆ 5 ನಿಮಿಷ ಕುದಿಸಿ ನಂತರ ಪಕ್ಕಕ್ಕಿಡಿ.
* ಈಗ ಇನ್ನೊಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಡಂಪ್ಲಿಂಗ್‌ಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಅದು ತೇಲಲು ಪ್ರಾರಂಭಿಸಿದ ತಕ್ಷಣ ನೀರಿನಿಂದ ತೆಗೆದು ಶುಂಠಿಯ ಸಿರಪ್‌ಗೆ ವರ್ಗಾಯಿಸಿ.
* ಇದೀಗ ಕರಿ ಎಳ್ಳಿನ ಡಂಪ್ಲಿಂಗ್ ಅಥವಾ ಟ್ಯಾಂಗ್ ಯುವಾನ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಕಬಾಬ್ ಪೌಡರ್ ಇಲ್ಲದೇ ಸೋಯಾ ಕಬಾಬ್ ಮಾಡಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್