ಫಿಲ್ಮಿ ಸ್ಟೈಲ್‌ ರೌಡಿಗಳಂತೆ ಯುವತಿಯರಿದ್ದ ಕಾರನ್ನ ಬೆನ್ನಟ್ಟಿದ್ದ ಯುವಕರು – ವಿಡಿಯೋ ವೈರಲ್‌

Public TV
1 Min Read

– ಭಯಗೊಂಡು ಕಾರಿನಲ್ಲೇ ಚಿರಾಡಿದ ಯುವತಿಯರು

ಚೆನ್ನೈ: ಸಿನಿಮಾದಲ್ಲಿ ರೌಡಿಗಳು ನಾಯಕಿ ಕಾರನ್ನು ಹಿಂಬಾಲಿಸುವ ದೃಶ್ಯವನ್ನು ನೀವು ನೋಡರಬಹುದು. ಈಗ ಈ ದೃಶ್ಯದಂತೆ ತಮಿಳಿನಾಡಿನಲ್ಲಿ (Tamilndu) ಯುವತಿಯರಿದ್ದ ಕಾರನ್ನು ಡಿಎಂಕೆ (DMK) ಧ್ವಜ ಹಾಕಿದ್ದ ಕಾರಿನಲ್ಲಿ ಯವಕರು ಬೆನ್ನಟ್ಟಿದ ಘಟನೆ ನಡೆದಿದೆ.

ಕಳೆದ ಶುಕ್ರವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಚೆನ್ನೈನ ಇಸ್ಟ್‌ ಕೋಸ್ಟ್‌ ರಸ್ತೆಯಲ್ಲಿರುವ ಮುಟ್ಟುಕಾಡು ಸೇತುವೆ ಬಳಿ ಯುವತಿಯರಿದ್ದ ಕಾರನ್ನು ಡಿಎಂಕೆ ಧ್ವಜ ಹೊಂದಿದ್ದ ಕಾರಿನಲ್ಲಿದ್ದ ಯುವಕರು ಹಿಂಬಾಲಿಸಿದ್ದಾರೆ.

ಯುವತಿಯರಿದ್ದ ಕಾರಿನ ಮುಂದೆ ಕಾರನ್ನು ನಿಲ್ಲಿಸಿದ್ದಾರೆ. ನಂತರ ಕಾರಿನಿಂದ ಯುವಕನೊಬ್ಬ ಇಳಿದು ಯುವತಿಯರ ಕಾರಿನ ಗ್ಲಾಸನ್ನು ಬಡಿದಿದ್ದಾನೆ. ಈ ವೇಳೆ ಆತಂಕಕ್ಕೆ ಒಳಗಾದ ಯುವತಿಯರು ಜೋರಾಗಿ ಕಿರುಚಾಡಿದ್ದಾರೆ.

ಹೇಗೋ ಯುವಕರಿಂದ ಪಾರಾದ ಯುವತಿಯರ ಪೈಕಿ ಒಬ್ಬಾಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡು ಕಾರಿನಲ್ಲಿ ಬಂದ ಸುಮಾರು 7 ರಿಂದ 8 ವ್ಯಕ್ತಿಗಳನ್ನು ನಮ್ಮನ್ನು ತಡೆದರು. ಅವರು ನಾವು ಮನೆಯವರೆಗೂ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಮನೆಯವರೆಗೂ ತಮ್ಮ ಕಾರನ್ನು ಬೆನ್ನಟ್ಟಿ, ತಮ್ಮನ್ನು ಎದುರಿಸಿ, ತಾವು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಮಹಿಳೆ ಹೇಳಿಕೊಂಡಿದ್ದಾಳೆ, ಆದರೆ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾರಿನ ಒಳಗಡೆಯೇ ಸೆರೆಯಾದ  ಈ ವಿಡಿಯೋ ಈಗ ವೈರಲ್‌ ಆಗಿದ್ದು,  ಸ್ಟಾಲಿನ್‌ ಸರ್ಕಾರದ ವಿರುದ್ಧ ಎಐಎಡಿಎಂಕೆ ಮತ್ತು ಬಿಜೆಪಿ ಮುಗಿ ಬಿದ್ದಿದೆ.

Share This Article