ಕಾಂಗ್ರೆಸ್ ಕಾವೇರಿ, ಮೇಕೆದಾಟು ವಿಚಾರ ತಂದು ತಮಿಳುನಾಡು-ಕರ್ನಾಟಕ ನಡುವೆ ಬಿರುಕು ಮೂಡಿಸಿದೆ: ಅಣ್ಣಾಮಲೈ

Public TV
1 Min Read

ಕೋಲಾರ: ತಮಿಳುನಾಡು ಮತ್ತು ಕರ್ನಾಟಕ ಬಾಂಧವ್ಯ ಚೆನ್ನಾಗಿರಲು ಹಲವು ವಿಚಾರಗಳಿವೆ. ಆದ್ರೆ ಕಾಂಗ್ರೆಸ್ 2 ರಾಜ್ಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೋಲಾರದಲ್ಲಿ ಹೇಳಿದರು.

ಕೋಲಾರದ ಕೆಜಿಎಫ್ ನಗರದಲ್ಲಿ ಭಾನುವಾರ ಬಿಜೆಪಿ ಸಮಾವೇಶ ಮಾಡುವ ಮೂಲಕ ತಮಿಳು ಮತಗಳನ್ನು ಸೆಳೆಯಲು ಬಿಜೆಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ಅಣ್ಣಾಮಲೈ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮೇಕೆದಾಟು ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಸೋಂಕಿನಿಂದ ಇಂದು 1 ಸಾವು – 92 ಮಂದಿ ಡಿಸ್ಚಾರ್ಜ್

ತಮಿಳುನಾಡು ಮತ್ತು ಕರ್ನಾಟಕದ ಬಾಂಧವ್ಯಕ್ಕಾಗಿ ಹಲವು ವಿಚಾರಗಳಿವೆ. ವ್ಯಾಪಾರ, ಕೃಷಿ ಸೇರಿದಂತೆ ಹಲವು ವಿಚಾರಗಳಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿಯೇ ಇದ್ದೇವೆ. ತಮಿಳುನಾಡಿನ ಎಷ್ಟೋ ಮಂದಿ ಬೆಂಗಳೂರಿನ ಐಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಬಾಂಧವ್ಯಕ್ಕೆ ಹಲವು ವಿಚಾರಗಳಿದ್ರು, ಕಾಂಗ್ರೆಸ್ ಜನರನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ವಿಚಾರವಾಗಿ ಜನರನ್ನು ಡಿವೈಡ್ ಮಾಡಿದ್ರು. ಮೇಕೆದಾಟು ವಿಚಾರ ಕೇಂದ್ರ ಸಚಿವರೊಬ್ಬರ ಕೈಯಲ್ಲಿದೆ. ಹಾಗಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆಗಲಿದೆ. ಇದರಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಡೆದುಕೊಳ್ಳಬೇಕು. ಕರ್ನಾಟಕ, ತಮಿಳುನಾಡಿನ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ನಾನು ಯೋಜನೆ ಪರವೋ, ವಿರುದ್ಧವೋ ಎನ್ನುವುದು ಮುಖ್ಯವಲ್ಲ ಎಂದು ಹೇಳಿದರು.

ಪಿಎಸ್‍ಐ ಹಗರಣ ಕುರಿತು ತಿಳಿದುಕೊಂಡು ಮಾತನಾಡುತ್ತೇನೆ. ನಾನು ತಮಿಳುನಾಡಿನ ರಾಜಕಾರಣ ಹಾಗೂ ಸಭೆ ಸಮಾರಂಭಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಗಾಗಿ ಇದರ ಬಗ್ಗೆ ನನಗೆ ಸತ್ಯವಾಗಿ ಏನೂ ಗೊತ್ತಿಲ್ಲ, ಮಾಹಿತಿ ಇಲ್ಲ. ಆದ್ರೆ ಯಾರಿಗೂ ಅನ್ಯಾಯ ಆಗಬಾರದು ಎಂದು ಹೇಳಿದರು. ಇದನ್ನೂ ಓದಿ:  ಕೊಡಗಿನಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ತುಡಿತ – 5 ವರ್ಷಗಳಲ್ಲಿ 48 ಪೋಷಕರ ಅರ್ಜಿ 

Share This Article
Leave a Comment

Leave a Reply

Your email address will not be published. Required fields are marked *