ಕರ್ನಾಟಕಕ್ಕೆ ಅನ್ಯಾಯವಾದ್ರೆ ಸಹಿಸಲ್ಲ – ʻಕರ್ನಾಟಕ ಬಂದ್‌ʼಗೆ ತಮಿಳು ಸಂಘದಿಂದ ಬೆಂಬಲ

Public TV
1 Min Read

ಚಾಮರಾಜನಗರ: ಕಾವೇರಿ ಹೋರಾಟದ (Cauvery Protest) ಭಾಗವಾಗಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘ (Tamil Organisation) ಬೆಂಬಲ ಘೋಷಿಸಿದೆ.

ಕರ್ನಾಟಕ ಬಂದ್ ಸಂಬಂಧ ಚಾಮರಾಜನಗರದ (Chamarajanagar) ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪೂರ್ವಭಾವಿ ಸಭೆ ನಡೆಸಿದ್ದಾರೆ. ಇದನ್ನೂ ಓದಿ: World Cup 2023: ಇನ್ನೂ ವೀಸಾ ಸಿಕ್ಕಿಲ್ಲ – ಪಾಕಿಸ್ತಾನ ಆಟಗಾರರಿಗೆ ಶುರುವಾಯ್ತು ಹೊಸ ಸಮಸ್ಯೆ

ಸಭೆಯಲ್ಲಿ ಭಾಗವಹಿಸಿದ್ದ ಚಾಮರಾಜನಗರ ಜಿಲ್ಲಾ ತಮಿಳಿಗರ ಸಂಘದ ಕಾರ್ಯದರ್ಶಿ ಜಗದೀಶನ್ ಮಾತನಾಡಿ, ಕರ್ನಾಟಕದಲ್ಲಿ 19 ತಮಿಳು ಸಂಘಟನೆಗಳಿವೆ. ನಾವೆಲ್ಲರೂ ಕನ್ನಡಿಗರೇ ಆಗಿದ್ದೇವೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಒಂದು ತೊಟ್ಟು ನೀರನ್ನು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ಕಾವೇರಿ ವಿಚಾರದಲ್ಲಿ ಯಾವತ್ತೂ ತಮಿಳುನಾಡಿನ ವಿರುದ್ಧ ದಿಕ್ಕಾರ ಕೂಗ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಸ್ತೆಗಿಳಿಯಲ್ಲ BMTC, KSRTC; ಶಾಲಾ- ಕಾಲೇಜುಗಳಿಗೂ ರಜೆ: ಮಂಗಳವಾರ ಏನಿರತ್ತೆ..?, ಏನಿರಲ್ಲ..?

ನಮ್ಮ ಮನಸ್ಸು ಯಾವತ್ತಿಗೂ ಕರ್ನಾಟಕದ ಪರವೇ ಇರುತ್ತೆ. ನಾವು ಕರ್ನಾಟಕದ ಪರ ಇರ್ತೀವಿ, ಕರ್ನಾಟಕದ ನೆಲ-ಜಲ ಬಳಸಿಕೊಂಡು ಜೀವಿಸುತ್ತಾ ಇದ್ದೇವೆ, ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್