ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್‌, ಸಿನಿಮಾ, ಹಾಡುಗಳ ನಿಷೇಧ?

Public TV
1 Min Read

– ಹೊಸ ಕಾಯ್ದೆ ತರಲು ತಮಿಳುನಾಡು ಸರ್ಕಾರ ಪ್ಲ್ಯಾನ್‌; ಹಿಂದಿ ಹೇರಿಕೆ ವಿರುದ್ಧ ಮಹತ್ವದ ಹೆಜ್ಜೆ

ಚೆನ್ನೈ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿರುವ ಎಂ.ಕೆ ಸ್ಟಾಲಿನ್‌ (MK Stalin) ನೇತೃತ್ವದ ತಮಿಳುನಾಡು ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ವಿಧಾನಸಭೆಯಲ್ಲಿಂದು ಹೊಸ ಮಸೂದೆ (Bill) ಮಂಡನೆಗೆ ತಯಾರಿ ನಡೆಸಿದೆ.

ಹೌದು. ತಮಿಳುನಾಡಿನಾದ್ಯಂತ ಹಿಂದಿ ಹೋರ್ಡಿಂಗ್ಸ್‌ (Hindi hoardings), ಬೋರ್ಡ್‌ಗಳು (ಬ್ಯಾನರ್‌ ಮಾದರಿಯವು), ಚಲನಚಿತ್ರಗಳು ಮತ್ತು ಹಾಡುಗಳನ್ನ ನಿಷೇಧಿಸುವ ಹೊಸ ಮಸೂದೆ ಮಂಡನೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ಮಂಗಳವಾರ ರಾತ್ರಿ ಕೂಡ ಮಸೂದೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳು ಈ ಕ್ರಮವು ಸಂವಿಧಾನಕ್ಕೆ ಅನುಗುಣವಾಗಿದೆ ಎಂದು ಹೇಳಿರುವುದಾಗಿ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆ ‘₹’ ಕೈಬಿಟ್ಟ ತಮಿಳುನಾಡು

ಮಸೂದೆಯ ಕುರಿತು ಡಿಎಂಕೆ ಹಿರಿಯ ನಾಯಕ ಟಿಕೆಎಸ್ ಇಳಂಗೋವನ್ (TKS Elangovan) ಪ್ರತಿಕ್ರಿಯಿಸಿದ್ದು, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುದಿಲ್ಲ. ಸಂವಿಧಾನದ ಆಶಯವನ್ನು ಪಾಲಿಸುತ್ತೇವೆ, ಆದ್ರೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್

ಆದಾಗ್ಯೂ ಬಿಜೆಪಿ (BJP) ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನ ತೀವ್ರವಾಗಿ ವಿರೋಧಿಸಿದೆ. ಬಿಜೆಪಿಯ ವಿನೋಜ್ ಸೆಲ್ವಂ ಪ್ರತಿಕ್ರಿತಿಸಿ, ಇದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನ ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಕಿಡಿ ಕಾರಿದರು.

ಈ ವರ್ಷದ ಮಾರ್ಚ್‌ನಲ್ಲೂ ಕೂಡ ಎಂ.ಕೆ ಸ್ಟಾಲಿನ್‌ ನೇತೃತ್ವದ ಸರ್ಕಾರ 2025-26ರ ರಾಜ್ಯ ಬಜೆಟ್‌‌ನಲ್ಲಿ ರೂಪಾಯಿಯ ಅಧಿಕೃತ ಚಿಹ್ನೆ ‘₹’ ಕೈ ಬಿಟ್ಟು ಬದಲಿಗೆ ‘ರುಬಾಯಿ’ (ತಮಿಳಿನಲ್ಲಿ ರೂಪಾಯಿ) ಯಿಂದ ‘ರು’ ಅನ್ನು ಆಯ್ಕೆ ಮಾಡಿಕೊಂಡಿತ್ತು. ಇದನ್ನೂ ಓದಿ: 

Share This Article