ಚೆನ್ನೈ: ಸಶಸ್ತ್ರ ಮೀಸಲು ಪೇದೆಯೊಬ್ಬ ತನ್ನ ಪ್ರೇಯಸಿಯನ್ನು ಹುಟ್ಟುಹಬ್ಬದ ದಿನದಂದೇ ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಬಳಿ ನಡೆದಿದೆ.
ಕಾರ್ತಿಕೇಯನ್ ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್. ಸರಸ್ವತಿ (21) ಹತ್ಯೆಯಾದ ಯುವತಿಯಾಗಿದ್ದು, ಆಕೆಯ ಹುಟ್ಟುಹಬ್ಬದ ಪ್ರಯುಕ್ತ ಕಾರ್ತಿಕೇಯನ್ ಮನೆಗೆ ತೆರಳಿದ್ದ. ಹುಟ್ಟುಹಬ್ಬದ ಸಂಭ್ರಮ ಆರಂಭವಾಗುದಕ್ಕೂ ಮುನ್ನ ಇಬ್ಬರು ಮನೆಯ ಮಹಡಿ ಮೇಲೆ ತೆರಳಿದ್ದು, ಈ ವೇಳೆ ಕಾರ್ತಿಕೇಯನ್ ತನ್ನ ರಿವಾಲ್ವರ್ ನಿಂದ ಸರಸ್ವತಿಯ ಎದೆಗೆ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಬಳಿಕ ಅದೇ ರಿವಾಲ್ವರ್ ನಿಂದ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಲ ದಿನಗಳಿಂದ ಸರಸ್ವತಿ ಪ್ರೇಮಿ ಕಾರ್ತಿಕೇಯನ್ ನನ್ನು ದೂರ ಮಾಡಲು ಯತ್ನಿಸುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈ ಮೆಡಿಕಲ್ ಕಾಲೇಜಿನಲ್ಲಿ ತ ಸರಸ್ವತಿ ವಿದ್ಯಾಭ್ಯಾಸ ನಡೆಸುತ್ತಿದ್ದಾಗಿ ಮಾಹಿತಿ ಲಭಿಸಿದ್ದು, ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv