ತಮಿಳುನಾಡು ಕಾವೇರಿ ನೀರಿನ ಸಮರ್ಪಕ ಬಳಕೆ ಮಾಡುತ್ತಿಲ್ಲ – ಸುಪ್ರೀಂನಲ್ಲಿ ಕರ್ನಾಟಕ ಆಕ್ಷೇಪ

Public TV
1 Min Read

ನವದೆಹಲಿ: ತಮಿಳುನಾಡು (Tamil Nadu) ಪ್ರತಿಬಾರಿ ತನ್ನ ಉದ್ದೇಶ ಬದಲಿಸಿಕೊಳ್ಳುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಧಿಕಾರ (CWMA) ಸಭೆಯಲ್ಲಿ ಹೇಳಿದಂತೆ ಮೆಟ್ಟೂರು ಜಲಾಶಯದ ನೀರನ್ನು ಸದ್ಬಳಕೆ ಮಾಡಿಕೊಂಡಿಲ್ಲ. 69 ಟಿಎಂಸಿ ಶೇಖರಣೆ ನೀರನ್ನು ಸಮರ್ಪಕವಾಗಿ ಬಳಸದೇ ವ್ಯರ್ಥ ಮಾಡಿದೆ ಎಂದು ಕರ್ನಾಟಕ (Karnataka) ಸರ್ಕಾರ ಹೇಳಿದೆ.

ಹೆಚ್ಚುವರಿ ನೀರಿಗಾಗಿ ಕ್ಯಾತೆ ತೆಗೆದಿರುವ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಈ ಅಫಿಡೆವಿಟ್‌ಗೆ ಕರ್ನಾಟಕ ಸರ್ಕಾರವೂ ಆಕ್ಷೇಪಣೆ ಸಲ್ಲಿಸಿದೆ. ಆಕ್ಷೇಪಣೆಯಲ್ಲಿ ತಮಿಳುನಾಡಿನ ನೀರಿನ ಬಳಕೆ ಬಗ್ಗೆ ಕರ್ನಾಟಕ ತಕರಾರು ಎತ್ತಿದೆ.

ಜಲ ವರ್ಷದ ಆರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ 69 ಟಿಎಂಸಿ ಶೇಖರಣೆ ಇತ್ತು. ನೀರನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಕರ್ನಾಟಕದಿಂದ ಈವರೆಗೆ 31 ಟಿಎಂಸಿ ನೀರು ಹರಿಸಿದೆ. ಅದನ್ನು ಸರಿಯಾಗಿ ಬಳಸಿಕೊಂಡಿದ್ದರೂ ನೀರಿನ ಕೊರತೆಯ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕಾವೇರಿ ಅರ್ಜಿ ವಿಚಾರಣೆ ಸೆ.21ಕ್ಕೆ ಮುಂದೂಡಿಕೆ

ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ಬಿಡಲು ಸೂಚಿಸಿದೆ. ಆದರೆ ಕಾವೇರಿ (Cauvery) ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆ ಇರುವ ಹಿನ್ನೆಲೆ 3 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ಗೆ ಕೋರಲಾಗಿದೆ. ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನಲ್ಲಿ ಮಳೆಯಾಗಲಿದೆ. ಮೆಟ್ಟೂರು ಆಸುಪಾಸು ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಮೇಲಿನ ಒತ್ತಡ ತಗ್ಗಿಸಬೇಕು ಎಂದು ಕರ್ನಾಟಕ ಮನವಿ ಮಾಡಿದೆ. ಇದನ್ನೂ ಓದಿ: ಕಾರಂಜಾ ಜಲಾಶಯದಿಂದ ಬರೋಬ್ಬರಿ 7,500 ಕ್ಯೂಸೆಕ್ ನೀರು ಬಿಡುಗಡೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್