ಚೆನ್ನೈ: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಆದೇಶ ಹೊರಡಿಸುವ ಮುನ್ನವೇ ತಮಿಳುನಾಡು ಸರ್ಕಾರ ಏಪ್ರಿಲ್ 30ರವರೆಗೂ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಪಳನಿಸ್ವಾಮಿ ಅವರು, ಈ ಬಗ್ಗೆ ಸರ್ಕಾರ 2005ರ ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿರ್ಣಯ ತೆಗೆದುಕೊಂಡು, ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಹೊರಡಿಸುವ ನಿಯಮಗಳು ಲಾಕ್‍ಡೌನ್ ವಿಸ್ತರಣೆಯಲ್ಲಿ ಒಳಗೊಳ್ಳಲಿದ್ದು, ಸರ್ಕಾರದ ಆದೇಶದಂತೆ ಪಡಿತರ ವಿತರಣೆ ಕಾರ್ಯ ನಡೆದಿದೆ. ಕೊರೊನಾ ವೈರಸ್ ವಿರುದ್ಧ ತಮಿಳುನಾಡು ಸರ್ಕಾರದ ಸಮರ್ಥ ಹೋರಾಟ ನಡೆಸಲಿದೆ ಎಂದರು.
ಕೇಂದ್ರ ಸರ್ಕಾರಕ್ಕೂ ಮುನ್ನ ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ಲಾಕ್‍ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ಅವರು ದೇಶದ ಜನರನ್ನುದ್ದೇಶಿಸಿ ಮಾತಮಾಡಲಿದ್ದಾರೆ.