ಸಿಟಿ ಬಸ್ ಏರಿದ ಸಿಎಂ ಸ್ಟಾಲಿನ್ – ಪ್ರಯಾಣಿಕರು ಫುಲ್ ಶಾಕ್

Public TV
1 Min Read

ಚೆನ್ನೈ: ಚೆನ್ನೈನ ಮಹಿಳೆಯರನ್ನು ಉಚಿತವಾಗಿ ಕರೆದೊಯ್ಯುವ ಮಹಾನಗರ ಪಾಲಿಕೆ ಬಸ್ಸಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹತ್ತಿ ಅಲ್ಲಿನ ಪ್ರಯಾಣಿಕರೊಂದಿಗೆ ಉಚಿತ ಪ್ರಯಾಣದ ಯೋಜನೆ ಕುರಿತಂತೆ ಸಂಭಾಷಣೆ ನಡೆಸಿದರು.

ಸ್ಟಾಲಿನ್ ಅವರು ಆರನೇ ಮೆಗಾ ಕೋವಿಡ್-19 ಇನಾಕ್ಯುಲೇಷನ್ ಅಭಿಯಾನದ ಅಂಗವಾಗಿ ಆಯೋಜಿಸಲಾದ ಕೆಲವು ಲಸಿಕೆ ಶಿಬಿರಗಳಿಗೆ ಪರಿಶೀಲನೆಗೆಂದು ತೆರಳಿದ್ದ ವೇಳೆ ಕನ್ನಗಿ ನಗರದಲ್ಲಿ ಬಸ್ ಹತ್ತಿದರು. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ  

ಸಿಎಂ ಸ್ಟಾಲಿನ್ ಅವರು ಎಂ-19ಬಿ ಕನ್ನಗಿ ನಗರದಿಂದ ಟಿ-ನಗರಕ್ಕೆ ಹೋಗುತ್ತಿದ್ದ ಬಸ್ ಹತ್ತಿದರು. ಈ ವೇಳೆ ಮುಖ್ಯಮಂತ್ರಿಗಳನ್ನು ನೋಡಿ ಪ್ರಯಾಣಿಕರು ಸಂತೋಷಪಟ್ಟರು ಮತ್ತು ಮಹಿಳೆಯರಿಗಾಗಿ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆ ಕುರಿತಂತೆ ಮಹಿಳೆಯರನ್ನು ವಿಚಾರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

தி. நகர் – கண்ணகி நகர் வழித்தட பேருந்தில் மாண்புமிகு முதலமைச்சர் @mkstalin அவர்கள் திடீரென ஆய்வு மேற்கொண்டு, பெண்களிடம் மகளிருக்கான இலவச பேருந்து பயண திட்டம் குறித்து கேட்டறிந்தார். pic.twitter.com/QbKwZKpB3i

ಇನ್ನೂ ಈ ಕುರಿತಂತೆ ಸ್ಟಾಲಿನ್ ತಮ್ಮ ಟ್ವಿಟ್ಟರ್‌ನಲ್ಲಿ, ಸಿಟಿ ಬಸ್‍ನಲ್ಲಿ ವಿರ್ಮಶಿಸುತ್ತಿದ್ದ ವೇಳೆ, ಮಹಿಳೆಯರ ಮುಖದಲ್ಲಿ ಮಂದಹಾಸ ನೋಡಿ ನನ್ನ ಮುಖ ಕೂಡ ನಗು ಅರಳಿತು ಎಂದು ಟ್ವೀಟ್ ಮಾಡುವುದರ ಜೊತೆಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

ವೀಡಿಯೋದಲ್ಲಿ ಸ್ಟಾಲಿನ್ ಹಿಂದೆ ಬಾಡಿಗಾಡ್ರ್ಸ್ ನಿಂತಿರುವುದನ್ನು ಮತ್ತು ಸ್ಟಾಲಿನ್ ರಸ್ತೆ ದಾಟಿ ಇನ್ನೊಂದು ಬದಿಯ ಬಸ್ಸನ್ನು ಹತ್ತುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಬಸ್ ಹತ್ತಿದ ಸ್ಟಾಲಿನ್ ಅವರನ್ನು ಪ್ರಯಾಣಿಕರು ನಮಸ್ಕಾರಿಸಿ ಸ್ವಾಗತಿಸಿದರು. ಮತ್ತೆ ಕೆಲವು ಮಹಿಳೆಯರು ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *