ಕಾರ್ಡಿಯಾಕ್ ಅರೆಸ್ಟ್: ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Public TV
1 Min Read

ಕಾಲಿವುಡ್‌ನಲ್ಲಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಸೂರ್ಯ ಪ್ರಕಾಶ್ (Surya Prakash) ಇಂದು (ಮೇ 27) ಹೃದಯ ಸ್ತಂಭನದಿಂದ (Cardiac Arrest) ನಿಧನರಾಗಿದ್ದಾರೆ. ಅವರ ನಿಧನಕ್ಕೆ ತಮಿಳು ನಟ ಶರತ್ ಕುಮಾರ್ ದಂಪತಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಸಮರ್ಜಿತ್ ಲಂಕೇಶ್ ಜೊತೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಸ್ತ್ ಸ್ಟೆಪ್ಸ್

ನಾನು ನಟಿಸಿದ ‘ಮಾಯಿ’ ಮತ್ತು ‘ದಿವಾನ್’ ಚಿತ್ರಗಳನ್ನು ನಿರ್ದೇಶಿಸಿದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನಿನ್ನೆಯಷ್ಟೇ ಅವರೊಂದಿಗೆ ಮಾತನಾಡಿದ್ದೆ. ಅವರ ಹಠಾತ್ ನಿಧನ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನಟ ಶರತ್‌ಕುಮಾರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

56ನೇ ವಯಸ್ಸಿಗೆ ಸೂರ್ಯ ಪ್ರಕಾಶ್ ಸಾವಿನ ಸುದ್ದಿ ಕೇಳಿ ಸುದ್ದಿ ಕೇಳಿ ಕುಟುಂಬಸ್ಥರು, ಅಭಿಮಾನಿಗಳಿಗೆ ಆಘಾತವಾಗಿದೆ. ಅಂತಿಮ ವಿಧಿವಿದಾನಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ವಿವರ ಸಿಗಬೇಕಿದೆ. ಅಂದಹಾಗೆ, ಮಾಯಿ, ಮಣಿಕ್ಕಂ, ದಿವಾನ್, ಭರತಸಿಂಹ ರೆಡ್ಡಿ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸೂರ್ಯ ಪ್ರಕಾಶ್ ಹಿಟ್ ಚಿತ್ರಗಳನ್ನು ನೀಡಿದ್ದರು.

Share This Article