ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

Public TV
1 Min Read

ನವದೆಹಲಿ: ತಮಿಳು ನಟಿ ರಾಧಿಕಾ ಶರತ್‌ಕುಮಾರ್ (Radhika Sarathkumar) ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರನ್ನು (Virat Kohli) ಭೇಟಿಯಾಗಿದ್ದು, ಅವರೊಂದಿಗಿನ ಸೆಲ್ಫಿಯನ್ನು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗುರುವಾರ (ಸೆ.12) ಲಂಡನ್‌ನಿಂದ (London) ಚೆನ್ನೈಗೆ (Chennai) ತೆರಳುವಾಗ ವಿಮಾನದಲ್ಲಿ ಭೇಟಿಯಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಭೇಟಿಯಾದ ಕ್ಷಣವನ್ನು ರಾಧಿಕಾ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಪ್ರಜ್ವಲ್ ವಿರುದ್ಧ 3ನೇ ಕೇಸ್- ಎಸ್‌ಐಟಿಯಿಂದ 1,691 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಸೆ.19ರಿಂದ ನಡೆಯಲಿರುವ ಬಾಂಗ್ಲಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ವಿರಾಟ್ ಕೊಹ್ಲಿ ಲಂಡನ್‌ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ರಾಧಿಕಾ ಶರತ್‌ಕುಮಾರ್, ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯನ್ನು ನಾನು ಭೇಟಿಯಾಗಿರುವುದು ರೋಮಾಂಚನವನ್ನುಂಟು ಮಾಡಿದೆ. ಅವರೊಂದಿಗೆ ಪ್ರಯಾಣಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ನಟಿ ರಾಧಿಕಾ ಶರತ್‌ಕುಮಾರ್ ತೇರಿ, ಚಂದ್ರಮುಖಿ, ಪೊಕ್ಕಿರಿ ರಾಜ, ಚಿತ್ತಿ ಮತ್ತು ನಲ್ಲವನುಕ್ಕು ನಲ್ಲವನ್‌ನಲ್ಲಿ ತಮ್ಮ ಪಾತ್ರಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಅವರು ಹಿಮ್ಮತ್ವಾಲಾ, ಲಾಲ್ ಬಾದ್ಶಾ, ನಸೀಬ್ ಅಪ್ನಾ ಅಪ್ನಾ, ಮತ್ತು ಮೇರಾ ಪತಿ ಸಿರ್ಫ್ ಮೇರಾ ಹೈ ಸೇರಿದಂತೆ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ರೈತರಿಗೆ ಅನುಕೂಲ ಮಾಡದೇ ಮಣ್ಣಿನ ಮಕ್ಕಳು ಅಂತಾರೆ: ಹೆಚ್‌ಡಿಕೆ ವಿರುದ್ಧ ಸಿಎಂ ವಾಗ್ದಾಳಿ

Share This Article