ರೋಜಾ ಕೂಟಂ, ಮನಸೆಲ್ಲಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ತಮಿಳು ಹಾಗೂ ತೆಲುಗು ನಟ ಶ್ರೀಕಾಂತ್ (Tamil Actor Srikanth) ಅವರನ್ನು ಡ್ರಗ್ಸ್ ಕೇಸ್ (drug abuse case) ಅಡಿ ಬಂಧಿಸಲಾಗಿದೆ. ಬೆಳಗ್ಗೆಯಷ್ಟೇ ವಿಚಾರಣೆಗಾಗಿ ಚೆನ್ನೈ ಪೊಲೀಸರು ಶ್ರೀಕಾಂತ್ ಅಲಿಯಾಸ್ ಶ್ರೀರಾಮ್ನನ್ನು ವಶಕ್ಕೆ ಪಡೆದಿದ್ದರು. ಶ್ರೀಕಾಂತ್ ಡ್ರಗ್ಸ್ ಸೇವನೆ ಧೃಡಪಟ್ಟಿರುವುದರಿಂದ ಬಂಧಿಸಲಾಗಿದೆ ಎನ್ನುವ ಮಾಹಿತಿ ಇದೆ.
ಡ್ರಗ್ಸ್ ಸೇವೆನೆ ಪತ್ತೆ ಹಚ್ಚುವುದಕ್ಕಾಗಿ ನುಂಗಂಬಾಕ್ಕಂ ಪೊಲೀಸರು (Nungambakkam police) ಶ್ರೀಕಾಂತ್ ರನ್ನು ಕರೆತಂದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರು. ಸದ್ಯ ರಕ್ತದ ಪರೀಕ್ಷೆಯ ವರದಿ ಬಂದಿದ್ದು, ಶ್ರೀಕಾಂತ್ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ. ಜೊತೆಗೆ ಡ್ರಗ್ಸ್ ವ್ಯವಹಾರವನ್ನೂ ಮಾಡಿದ್ದು ಬೆಳಕಿಗೆ ಬಂದಿದೆ. ಹಾಗಾಗಿ ಎನ್ ಡಿಪಿಎಸ್ ಕಾಯ್ದೆ ಅಡಿ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಎಐಎಇಎಂಕೆಯ ಐಟಿ ವಿಭಾಗದ ಮಾಜಿ ಸದಸ್ಯ ಪ್ರಸಾದ್ ಎಂಬಾತನನ್ನು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಅನ್ನುವ ಕಾರಣಕ್ಕೆ ಬಂಧಿಸಲಾಗಿತ್ತು. ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್
ಆತ ಡ್ರಗ್ಸ್ ಅನ್ನು ಶ್ರೀಕಾಂತ್ಗೆ ಸಪ್ಲೈ ಮಾಡಿದ್ದಾಗಿ ಹೇಳಿಕೊಂಡಿದ್ದ. ನಂತರ ಶ್ರೀಕಾಂತ್ ರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಪ್ರತಿ ಗ್ರಾಂಗೆ ಶ್ರೀಕಾಂತ್ ಹನ್ನೆರಡು ಸಾವಿರದ ದರದಂತೆ 40 ಬಾರಿ ಕೊಕೇನ್ ಖರೀದಿಸಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ