ಕಮಲ್ ಹಾಸನ್ ನಟನೆಯ ‘ಇಂಡಿಯನ್‌ 2’ ಸಿನಿಮಾದಲ್ಲಿ ಸಿದ್ಧಾರ್ಥ್

Public TV
1 Min Read

ಮಲ್ ಹಾಸನ್ (Kamal Haasan) ನಟನೆಯ ಬಹುನಿರೀಕ್ಷಿತ ‘ಇಂಡಿಯನ್ 2’ (Indian 2) ಸಿನಿಮಾದಲ್ಲಿ ತಮಿಳಿನ ನಟ ಸಿದ್ಧಾರ್ಥ್ (Siddarth) ನಟಿಸಿದ್ದಾರೆ. ಸಿದ್ಧಾರ್ಥ್ 45ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫಸ್ಟ್ ಪೋಸ್ಟರ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಈ ಮೂಲಕ ನಟನಿಗೆ ಚಿತ್ರತಂಡ ಶುಭಹಾರೈಸಿದೆ.

ಕೆಂಪು ಮತ್ತು ಬಿಳಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿರುವ ಸಿದ್ಧಾರ್ಥ್ ಫೋಟೋ ಶೇರ್ ಮಾಡಿ ನಿರ್ಮಾಣ ಸಂಸ್ಥೆ ಬರ್ತ್ಡೇ ವಿಶ್ಸ್ ತಿಳಿಸಿದೆ. ಮೂಲಗಳ ಪ್ರಕಾರ, ಚಿತ್ರದಲ್ಲಿ ಕಮಲ್ ಹಾಸನ್ ಮೊಮ್ಮಗನಾಗಿ ಸಿದ್ಧಾರ್ಥ್ ನಟಿಸಿದ್ದಾರೆ ಎನ್ನಲಾಗಿದೆ. ಸಿದ್ಧಾರ್ಥ್ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗಿದೆ.

2003ರಲ್ಲಿ ‘ಬಾಯ್ಸ್’ ಎಂಬ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ಆ ಸಿನಿಮಾಗೆ ಎಸ್. ಶಂಕರ್ ನಿರ್ದೇಶನ ಮಾಡಿದ್ದರು. ಇದೀಗ 2ನೇ ಬಾರಿ ಶಂಕರ್ ಜೊತೆ ‘ಇಂಡಿಯನ್ 2’ ಚಿತ್ರದ ಮೂಲಕ ಚಿತ್ರತಂಡ ಸೇರಿಕೊಂಡಿದ್ದಾರೆ. ಇದನ್ನೂ ಓದಿ:Singham Again: ಶೂಟಿಂಗ್‌ನಲ್ಲಿ ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಬ್ಯುಸಿ

ಇಂಡಿಯನ್ ಸಿನಿಮಾ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಈಗ ಹಲವು ವರ್ಷಗಳ ನಂತರ ಪಾರ್ಟ್ 2ಗೆ ಚಾಲನೆ ಸಿಕ್ಕಿದೆ. ಇದೇ ಜೂನ್‌ಗೆ ಸಿನಿಮಾ ರಿಲೀಸ್ ಆಗುತ್ತಿದೆ. ಕಮಲ್ ಹಾಸನ್, ಪ್ರಿಯಾ ಭವಾನಿ ಶಂಕರ್, ಕಾಜಲ್, ರಕುಲ್, ಸಿದ್ಧಾರ್ಥ್, ವಿವೇಕ್ ಸೇರಿದಂತೆ ಹಲವರು ನಟಿಸಿದ್ದಾರೆ.

Share This Article