ರೈತರಿಗೆ ಉಚಿತ ಟ್ರ್ಯಾಕ್ಟರ್ ಕೊಟ್ಟ ರಾಘವ್ ಲಾರೆನ್ಸ್

Public TV
1 Min Read

ಕಾಲಿವುಡ್ ನಟ ರಾಘವ್ ಲಾರೆನ್ಸ್‌ (Raghava Lawrence) ಅವರು ಕಾರ್ಮಿಕರ ದಿನಾಚರಣೆಯಂದು (ಮೇ.1) ರೈತರಿಗೆ ಉಚಿತ ಟ್ರ್ಯಾಕ್ಟರ್ ಕೊಟ್ಟಿದ್ದಾರೆ. ನಟನ ಜನಪರ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಅಜಿತ್ ಕುಮಾರ್ ಸಿನಿಮಾದಲ್ಲಿ ನಟಿಮಣಿಯರ ದರ್ಬಾರ್

ಇಂದು (ಮೇ 1) ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ರಾಘವ ಲಾರೆನ್ಸ್ ರೈತರಿಗೆ 10 ಟ್ರ‍್ಯಾಕ್ಟರ್‌ಗಳನ್ನು ವಿತರಣೆ ಮಾಡಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಬೆಂಬಲಿಸಬೇಕಾಗಿ ವಿನಂತಿ ಎಂದು ಕೇಳಿದ್ದಾರೆ.

ಈ ವಿಶೇಷ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನನಗೆ ತುಂಬಾ ಸಂತೋಷವಾಗಿದೆ. ಆರಂಭದಲ್ಲಿ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರ‍್ಯಾಕ್ಟರ್ ನೀಡುತ್ತೇನೆ. ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರೂ ಈ ನಿಸ್ವಾರ್ಥ ಪ್ರಯಾಣವನ್ನು ಬೆಂಬಲಿಸಬೇಕು. ಶಬ್ದಗಳಿಗಿಂತ ಕಾರ್ಯಗಳು ಜೋರಾಗಿ ಮಾತನಾಡುತ್ತವೆ. ನನ್ನ ಪ್ರಯಾಣದಲ್ಲಿ ನನಗೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬೇಕು. ಇಂದಿನಿಂದ ಸೇವೆ ಆರಂಭವಾಗಿದೆ ಎಂದು ಲಾರೆನ್ಸ್ ಹೇಳಿರುವ ವಿಡಿಯೋ ಶೇರ್ ಮಾಡಿದ್ದಾರೆ.

ಇದಷ್ಟೇ ಅಲ್ಲ, ಇತ್ತೀಚೆಗೆ 150 ಮಕ್ಕಳನ್ನು ಲಾರೆನ್ಸ್ ದತ್ತು ಪಡೆದಿದ್ದರು. ಅವರ ಶಿಕ್ಷಣದ ಹೊಣೆ ನಟ ವಹಿಸಿಕೊಂಡಿದ್ದಾರೆ. ಸಿನಿಮಾ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ.

Share This Article