ಧನುಷ್ ಜೊತೆಗಿನ ‘ಕುಬೇರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಲುಕ್ ರಿವೀಲ್

By
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ‘ಪುಷ್ಪ 2’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಸ್ಟಾರ್ ನಟ ಧನುಷ್‌ಗೆ ಜೋಡಿಯಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಕುಬೇರ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದಲ್ಲಿ ಧನುಷ್ (Actor Dhanush) ಮತ್ತು ರಶ್ಮಿಕಾ ಪಾತ್ರದ ಲುಕ್ ಹೇಗಿರಲಿದೆ ಎಂಬುದು ಈಗ ರಿವೀಲ್ ಆಗಿದೆ.

‘ಲವ್ ಸ್ಟೋರಿ’ ಖ್ಯಾತಿಯ ಡೈರೆಕ್ಟರ್ ಶೇಖರ್ ಕುಬೇರ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಮೊದಲ ಹಂತದ ಶೂಟಿಂಗ್ ಮುಂಬೈನಲ್ಲಿ ಚಿತ್ರೀಕರಿಸಲಾಗಿತ್ತು. ಇದೀಗ ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿಸಿದೆ ಚಿತ್ರತಂಡ. ಶೂಟಿಂಗ್ ಮುಗಿಸಿ ಹೊರಬರುವಾಗ ಪಾಪರಾಜಿಗಳ ಕಣ್ಣಿಗೆ ರಶ್ಮಿಕಾ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಎಗ್ ಫ್ರೀಜ್ ಮಾಡಿ ಮಗು ಪಡೆಯುವ ಪ್ಲ್ಯಾನ್‌ನಲ್ಲಿದ್ದಾರೆ ‘ಸೀತಾರಾಮಂ’ ನಟಿ

 

View this post on Instagram

 

A post shared by Varinder Chawla (@varindertchawla)

ಧನುಷ್ ಕಂದು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ರೆ, ರಶ್ಮಿಕಾ ಸಿಂಪಲ್ ಚೂಡಿದಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಾಣುತ್ತಿದ್ದಂತೆ ಮುದ್ದಾಗಿ ನಟಿ ಸ್ಮೈಲ್ ಮಾಡಿದ್ದಾರೆ. ಈ ಮೂಲಕ‌ ಕುಬೇರ ಚಿತ್ರದಲ್ಲಿ ಇಬ್ಬರ ಲುಕ್ ಹೇಗಿರಲಿದೆ ಎಂಬುದು ರಿವೀಲ್ ಆಗಿದೆ.

‘ಕುಬೇರ’ (Kubera) ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಮೂಡಿ ಬರಲಿದೆ. ಧನುಷ್, ರಶ್ಮಿಕಾ ಮಂದಣ್ಣ ಜೊತೆ ಅಕ್ಕಿನೇನಿ ನಾಗಾರ್ಜುನ ಕೂಡ ನಟಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Share This Article