ತಮಿಳಿನ ಸ್ಟಾರ್ ನಟನಿಗೆ ರಶ್ಮಿಕಾ ನಾಯಕಿ- ಶೂಟಿಂಗ್‌ ವಿಡಿಯೋ ಲೀಕ್‌

Public TV
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಬಂಪರ್ ಚಾನ್ಸ್‌ ಸಿಕ್ಕಿದೆ. ಅನಿಮಲ್ (Animal) ಸಕ್ಸಸ್ ನಂತರ ಕಾಲಿವುಡ್ ಸ್ಟಾರ್ ನಟನಿಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಧನುಷ್ 51ನೇ ಸಿನಿಮಾಗೆ ‘ಪುಷ್ಪ’ ನಟಿ ಜೋಡಿಯಾಗಿದ್ದಾರೆ. ಸದ್ಯ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಿರುವ ವಿಡಿಯೋ ಲೀಕ್‌ ಆಗಿದೆ.

ಧನುಷ್ ಕೈ ಹಿಡಿದು ರಶ್ಮಿಕಾ (Rashmika Mandanna) ಎಳೆದೊಯ್ಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋನಲ್ಲಿ ರಶ್ಮಿಕಾ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಇದನ್ನೂ ಓದಿ:ಅನಾಥ ಮಕ್ಕಳ ದತ್ತು ಪಡೆದ ನಟಿ ಶ್ರೀಲೀಲಾ

ಈ ಚಿತ್ರವು ರಾಜಕೀಯ ವಸ್ತುವುಳ್ಳ ಕತೆಯಾಗಿದ್ದು, ರಾಜಕೀಯ ಕುತಂತ್ರಗಳನ್ನು ಸಾಮಾನ್ಯ ವ್ಯಕ್ತಿಯೊಬ್ಬ ಹೇಗೆ ಎದುರಿಸುತ್ತಾನೆ, ರಾಜಕೀಯದ ದೌರ್ಜನ್ಯಕ್ಕೆ ಹೇಗೆ ತುತ್ತಾಗುತ್ತಾನೆ ಅದರಿಂದ ಹೊರಗೆ ಹೇಗೆ ಬರುತ್ತಾನೆ ಎಂಬುದು ಚಿತ್ರದ ಕಥೆಯಾಗಿದೆ.

ಅಂದಹಾಗೆ ಈ ಚಿತ್ರವನ್ನು ‘ಲವ್‌ಸ್ಟೋರಿ’ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ-ಧನುಷ್ ಒಟ್ಟಿಗೆ ನಟಿಸುತ್ತಿದ್ದಾರೆ. ಹಾಗಾಗಿ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

ಅನಿಮಲ್ 2, ಪುಷ್ಪ 2, ರೈನ್‌ಬೋ, ಸೇರಿದಂತೆ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ.

Share This Article