ಕೆಂಪು ಸುಂದರಿ ಜಾಗಕ್ಕೆ ಹುಣಸೆ ಹಣ್ಣು ಎಂಟ್ರಿ- ಡಿಮ್ಯಾಂಡ್ ಬೆನ್ನಲ್ಲೇ ದರ ಏರಿಕೆ

Public TV
2 Min Read

ಬೆಂಗಳೂರು: ಅತ್ತೆಗೊಂದು ಕಾಲ ಆದ್ರೆ, ಸೊಸೆಗೊಂದು ಕಾಲ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕೆಂಪು ಸುಂದರಿ ಟೊಮೆಟೋ (Tomato). ಕೆಲವೊಮ್ಮೆ ಬೇರೆ ತರಕಾರಿಗಳ ದರ ಗಗನಕ್ಕೇರಿದರೂ, ಟೊಮೆಟೋವನ್ನ ಮಾತ್ರ ಕೇಳೋರೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗುತ್ತಿರುತ್ತದೆ. ಅದೆಷ್ಟೋ ಬಾರಿ ರೇಟ್ ಇಲ್ಲ ಅಂತ ರೈತರು ರಸ್ತೆಗೆ ಸುರಿದು ಹೋಗಿರೋ ಹತ್ತಾರು ಉದಾಹರಣೆಗಳನ್ನ ಕಂಡಿದ್ದೀವಿ. ಆದರೆ ಈಗ ಇದೇ ಟೊಮೆಟೋ ಸೇಬಿನ ದರಕ್ಕೆ ಸಮನಾಗಿ ಮುನ್ನುಗ್ಗುತ್ತಿದೆ. ದಿನಕಳೆದಂತೆ ಟೊಮೆಟೋ ದರ ಏರಿಕೆ ಆಗ್ತಿದ್ದು, ಅನೇಕ ಮಧ್ಯಮ ವರ್ಗದ ಜನ ಟೊಮೆಟೋ ಖರೀದಿ ಮಾಡಿ ಅಡುಗೆ ಮಾಡೋದು ಸಾಕಪ್ಪ ಅಂತ ಟೊಮೆಟೋಗೆ ಬೈ ಹೇಳಿ ಪರ್ಯಾಯವಾಗಿ ಹುಣಸೆ ಹಣ್ಣಿನ ಬಳಕೆ ಹೆಚ್ಚು ಮಾಡುತ್ತಿದ್ದಾರೆ. ಸದ್ಯ ಹುಣಸೆ ಹಣ್ಣಿನ ಬೆಲೆ ಕೂಡ ಸದ್ದಿಲ್ಲದೆ ಏರಿಕೆಯಾಗ್ತಿದೆ.

tomato

ಹೌದು. ಕಳೆದ ಒಂದೂವರೆ ತಿಂಗಳಿನಿಂದ ಟೊಮೆಟೋ ದರ ಏರಿಕೆ ಹಿನ್ನೆಲೆ ಅನೇಕರು ಟೊಮೆಟೋ ಜಾಗಕ್ಕೆ ಹುಣಸೆ ಹಣ್ಣು (Tamarind) ಪರ್ಯಾಯ ಬಳಕೆ ಮಾಡಿ ಅಡುಗೆ ಮಾಡ್ತಿದ್ದಾರೆ. ಆದರೆ ಈಗ ಅಂತವರಿಗೆ ಮತ್ತೆ ಶಾಕ್ ಎದುರಾಗಿದೆ. ಟೊಮೆಟೋ ದರ ಹೆಚ್ಚಾದ ಹುಣಸೆ ಹಣ್ಣು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿ ಹುಣಸೆ ಹಣ್ಣಿನ ಡಿಮ್ಯಾಂಡ್ ಹೆಚ್ಚಾಗಿದೆ. ಕಾರಣ ಹುಣಸೆ ಹಣ್ಣಿನ ದರ ಕೂಡ ಹೆಚ್ಚಾಗಿದ್ದು, ಟೊಮೆಟೋ ಬದಲಿ ಜಾಗಕ್ಕೆ ಹೊಸ ಆಪ್ಷನ್ ಹುಡುಕಿಕೊಂಡಿದ್ದ ಜನ ಅಯ್ಯೋ ದೇವರೇ ಇನ್ನೇನಪ್ಪಾ ಗತಿ ಎನ್ನುವಂತಾಗಿದೆ.

ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಸದ್ಯ 40 ರಿಂದ 50 ರೂಪಾಯಿ ಕೆ.ಜಿ ಹುಣಸೆ ಹಣ್ಣಿನ ದರ ಹೆಚ್ಚಳವಾಗಿದೆ. ಕಳೆದ ತಿಂಗಳು 120 ರೂಪಾಯಿ ಇದ್ದ ಕೆ.ಜಿ ಹುಣಸೆ ಈಗ 160, 170 ರೂಪಾಯಿ ಆಗಿದೆ. ಈಗಷ್ಟೇ ಹುಣಸೆ ಹಣ್ಣಿನ ಸೀಸನ್ ಮುಗಿದಿದ್ದರೂ ಬೇಡಿಕೆ ಹೆಚ್ಚಾಗಿರುವ ಕಾರಣ ದರ ಕೂಡ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇದನ್ನೂ ಓದಿ: 2 ಸಾವಿರ ಟೊಮೆಟೋ ಬಾಕ್ಸ್‌ ಮಾರಾಟ – 38 ಲಕ್ಷ ಸಂಪಾದಿಸಿದ ಕೋಲಾರದ ಕುಟುಂಬ

ಅಂಗಡಿಗೆ ಬರುವ ಮಹಿಳೆಯರು ಕೂಡ ಹೆಚ್ಚಾಗಿ ಹುಣಸೆ ಹಣ್ಣಿನ ಖರೀದಿ ಮಾಡುತ್ತಿದ್ದಾರೆ. ಕಾಸ್ಟ್ಲಿ ಆದರೂ ಇನ್ನೇನು ಮಾಡೋದು ಒಂದು ಕೆ.ಜಿ ಜಾಗಕ್ಕೆ ಅರ್ಧ ಕೆ.ಜಿ ಕೊಡಿ ಅಂತಾ ಕೇಳಿ ಪಡೆದು ಹೊಗ್ತಿದ್ದಾರಂತೆ. ಜೊತೆಗೆ ಎಲ್ಲಾ ಪದಾರ್ಥಗಳ ದರ ಕೂಡ ಹೆಚ್ಚಾಗ್ತಿದ್ದು, ಅದರಂತೆ ಹುಣಸೆ ದರ ಕೂಡ ಸದ್ಯ ದರ ಏರಿಕೆ ಆಗಿರೋದು ಮುಂದೆ ನೋಡಬೇಕು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಒಟ್ಟಾರೆ ಒಂದಲ್ಲ ಒಂದು ಆಯ್ಕೆ ಹುಡುಕಿಕೊಳ್ಳುತ್ತಿರೋ ಜನರಿಗೆ, ಹುಡುಕಿಕೊಂಡ ಆಯ್ಕೆಗಳು ಕೂಡ ಕಾಸ್ಟ್ಲಿ ಆಗ್ತಿರೋದು ತಲೆನೋವಾಗಿ ಪರಿಣಮಿಸಿದೆ. ಸದ್ಯಕ್ಕಂತು ದರ ಏರಿಕೆಗಳು ಇಳಿಯುವಂತೆ ಕಾಣ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದ್ರೆ ನಮ್ಮ, ನಿಮ್ಮ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕೋದ್ರಲ್ಲಿ ಡೌಟೇ ಇಲ್ಲ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್