ಹೊಸ ಫೋಟೋಶೂಟ್‌ನಲ್ಲಿ ಲವ್‌ಬರ್ಡ್ಸ್- ತಮನ್ನಾ ತೊಡೆಯ ಮೇಲೆ ವಿಜಯ್ ವರ್ಮಾ

Public TV
1 Min Read

ಹುಭಾಷಾ ನಟಿ ತಮನ್ನಾ ಭಾಟಿಯಾ (Tamannah Bhatia) ಅವರು ಸಿನಿಮಾ ವಿಚಾರವಾಗಿ ಅದೆಷ್ಟು ಸುದ್ದಿ ಮಾಡ್ತಿದ್ದಾರೋ ಅಷ್ಟೇ ಬಾಯ್ ಫ್ರೆಂಡ್ ವಿಜಯ್ ವರ್ಮಾ (Vijay Varma)  ವಿಷ್ಯವಾಗಿಯೂ ಸೌಂಡ್ ಮಾಡಿದ್ದಾರೆ. ಸದ್ಯ ಬಿಟೌನ್ ನಯಾ ಕಪಲ್ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ

ಕನ್ನಡದ ಜಾಗ್ವರ್, ಕೆಜಿಎಫ್‌ನಲ್ಲಿ (KGF) ಸೊಂಟ ಬಳುಕಿಸಿದ್ದ ನಟಿ ಹಿಂದಿ, ಮರಾಠಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. 50 ಪ್ಲಸ್ ಸ್ಟಾರ್ ನಾಯಕರಿಗೂ ನಾಯಕಿಯಾಗಿ ತಮನ್ನಾ ಅವರೇ ಬೇಕು ಅನ್ನೋವಷ್ಟರ ಮಟ್ಟಿಗೆ ಮಿಲ್ಕಿ ಬ್ಯೂಟಿ ಹವಾ ಕ್ರಿಯೇಟ್ ಮಾಡಿದ್ದಾರೆ.

ಸದ್ಯ ‘ಜೀ ಕರ್ದಾ’ (Jee kardha) ವೆಬ್ ಸಿರೀಸ್‌ನಲ್ಲಿ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅನೇಕರ ಕೆಂಗಣ್ಣಿಗೆ ತಮನ್ನಾ ಗುರಿಯಾಗಿದ್ದಾರೆ. ಸದ್ಯ ‘ಲಸ್ಟ್ ಸ್ಟೋರಿಸ್ 2’ (Lust Stories 2) ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ವಿಜಯ್ ವರ್ಮಾ ಜೊತೆಗಿನ ಪ್ರೀತಿಯ ಬಗ್ಗೆ ತಮನ್ನಾ ಅಧಿಕೃತಗೊಳಿಸಿದ ಬೆನ್ನಲ್ಲೇ ಈ ಜೋಡಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ತಮನ್ನಾ ತೊಡೆ ಮೇಲೆ ವಿಜಯ್ ಮಲ್ಕೊಂಡಿದ್ದಾರೆ.

ಇತ್ತೀಚಿಗೆ ನಟಿ ವಿಜಯ್ ನನ್ನ ಖುಷಿಯ ಖಜಾನೆ ಎಂದು ಲವ್ ಬಗ್ಗೆ ರಿವೀಲ್ ಮಾಡಿದ್ರು. ಈಗ ಹೊಸ ಫೋಟೋಶೂಟ್ ಮೂಲಕ ವಿಜಯ್- ತಮನ್ನಾ ಸಂಚಲನ ಮೂಡಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಜೋಡಿಯ ಹೊಸ ಫೋಟೋ ನೋಡ್ತಿದ್ದಂತೆ ಮದುವೆ ಯಾವಾಗ ಅಂತಾ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

‘ಲಸ್ಟ್ ಸ್ಟೋರಿಸ್ 2’ ಶೂಟಿಂಗ್ ಸಮಯದಲ್ಲಿ ವಿಜಯ್- ತಮನ್ನಾಗೆ ಪ್ರೇಮಾಂಕುರವಾಯಿತು. ಅಂದಿನಿಂದ ಈ ಜೋಡಿ ಡೇಟಿಂಗ್ ಮಾಡ್ತಿದ್ದಾರೆ. ಲಸ್ಟ್ ಸ್ಟೋರಿಸ್‌ನಲ್ಲಿ ಜೋಡಿಯಾಗಿ ನಟಿಸಿದ್ದಾರೆ.

Share This Article