ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

Public TV
1 Min Read

ಬಾಲಿವುಡ್‌ನಲ್ಲಿ (Bollywood) ಸದ್ಯ ಸದ್ದು ಮಾಡ್ತಿರುವ ಜೋಡಿ ಅಂದರೆ ವಿಜಯ್ ವರ್ಮಾ- ತಮನ್ನಾ ಭಾಟಿಯಾ. ಇಬ್ಬರ ಬಗ್ಗೆ ಸಾಕಷ್ಟು ಸಮಯದಿಂದ ಲವ್ವಿ ಡವ್ವಿ ಕಥೆ ಕೇಳಿ ಬರುತ್ತಿದೆ. ವಿಜಯ್- ತಮನ್ನಾ ಇಬ್ಬರೂ ಇದರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮತ್ತೆ ಈ ಜೋಡಿ ಸುದ್ದಿಯಲ್ಲಿದ್ದಾರೆ.

ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್-ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ವಿಜಯ್ ವರ್ಮಾ- ತಮನ್ನಾ ಭಾಟಿಯಾ (Tamanna Bhatia) ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬ ಗುಸು ಗುಸು ಬಿಟೌನ್‌ನಲ್ಲಿ ಶುರುವಾಗಿದೆ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದ ಈ ಜೋಡಿಯ ಡೇಟಿಂಗ್ ಜೋರಾಗಿದೆ.

 

View this post on Instagram

 

A post shared by Manav Manglani (@manav.manglani)

ಇದೀಗ ವಿಜಯ್- ತಮನ್ನಾ ಡಿನ್ನರ್‌ಗೆ ಹಾಜರಾಗುವ ಮೂಲಕ ತಮ್ಮ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ. ಇಬ್ಬರೂ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಬಂದ ತಮನ್ನಾ ಮತ್ತು ವಿಜಯ್ ವರ್ಮಾ (Vijay Varma)  ಇಬ್ಬರೂ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ನಗು ಬೀರುತ್ತಾ ಒಟ್ಟಿಗೆ ಕಾರಿನಲ್ಲಿ ಹೊರಟರು. ವಿಜಯ್ ವರ್ಮಾ ಕಾರು ಚಲಾಯಿಸುತ್ತಿದ್ದರೆ ತಮನ್ನಾ ಪಕ್ಕದಲ್ಲಿ ಕುಳಿತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದೆ.

Share This Article