ಚುನಾವಣಾಧಿಕಾರಿಗಳ ಈ ಒಂದು ಎಡವಟ್ಟಿನಿಂದ ಜಿ.ಪಂ ಸದಸ್ಯೆಯ ಆಯ್ಕೆ ಅಸಿಂಧು

Public TV
1 Min Read

– ಮರುಚುನಾವಣೆಗೆ ಕೋರ್ಟ್ ಆದೇಶ

ಚಿಕ್ಕಬಳ್ಳಾಪುರ: ಚುನಾವಣಾಧಿಕಾರಿಗಳ ಎಡವಟ್ಟಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ನಗರಗೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಈಗ ಮರುಚುನಾವಣೆ ಎದುರಾಗಿದೆ.

ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಿಲ್ಲಾ ಪಂಚಾಯ್ತಿ ಸದಸ್ಯೆ ಭವ್ಯಾ ರಂಗನಾಥ ಅವರು ಜಯಶೀಲರಾಗಿದ್ದು ಇಷ್ಟು ದಿನ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಆದ್ರೆ ಇದೀಗ ಭವ್ಯ ರಂಗನಾಥ್‍ರ ಸದಸ್ಯತ್ವವನ್ನ ಅಸಿಂಧುಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಭವ್ಯ ರಂಗನಾಥ್‍ & ಸರಸ್ವತಮ್ಮ

ಮರುಚುನಾವಣೆಗೆ ಕಾರಣವೇನು?: ಕಳೆದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ 128 ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸರಸ್ವತಮ್ಮ ಪರಾಭವಗೊಂಡಿದ್ದರು. ನಂತರ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನಗರಗೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯ ಹುಣಸೇನಹಳ್ಳಿ ಮತಗಟ್ಟೆಯಲ್ಲಿ, ತಾಲೂಕು ಪಂಚಾಯ್ತಿ ಮತ ಯಂತ್ರವನ್ನು ಜಿಲ್ಲಾ ಪಂಚಾಯ್ತಿಗೆ, ಜಿಲ್ಲಾ ಪಂಚಾಯ್ತಿ ಮತ ಯಂತ್ರವನ್ನು ತಾಲೂಕು ಪಂಚಾಯ್ತಿಗೆ ಸಂಪರ್ಕ ಕಲ್ಪಿಸಿ ಅದಲು ಬದಲು ಮಾಡಿದ್ದು ಬೆಳಕಿಗೆ ಬಂದಿತ್ತು. ಇದರಿಂದಾಗಿ ತನಗೆ ನ್ಯಾಯ ಕೊಡಿಸುವಂತೆ ಪರಾಜಿತ ಅಭ್ಯರ್ಥಿ ಸರಸ್ವತಮ್ಮ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯ, ನಗರಗೆರೆ ಜಿಲ್ಲಾ ಪಂಚಾಯ್ತಿ ಸದಸ್ಯೆ ಭವ್ಯಾ ರಂಗನಾಥರ ಆಯ್ಕೆಯನ್ನು ಅಸಿಂಧುಗೊಳಿಸಿ ಮರುಚುನಾವಣೆ ನಡೆಸಲು ಇಂದು ಆದೇಶ ನೀಡಿದೆ.

 

Share This Article
Leave a Comment

Leave a Reply

Your email address will not be published. Required fields are marked *