ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

Public TV
2 Min Read

– ಧಿಕ್ಕರಿಸಿ ಪಥಸಂಚಲನ ನಡೆಸಿದ್ದ ಕಾರ್ಯಕರ್ತರು ವಶಕ್ಕೆ

ಕಲಬುರಗಿ: ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ (RSS) ಹಮ್ಮಿಕೊಂಡಿದ್ದ ಪಥಸಂಚಲನಕ್ಕೆ ಸೇಡಂ (Sedam) ತಹಶೀಲ್ದಾರ್‌ ಶ್ರಿಯಾಂಕ್ ಅನುಮತಿ ನೀಡಲು ನಿರಾಕರಿಸಿದ್ದಾರೆ.

ಭಾನುವಾರ ಸಂಜೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್‌ ಪ್ರತಿನಿಧಿಸುವ ಸೇಡಂ ಕ್ಷೇತ್ರದ ಸೇಡಂ ಪಟ್ಟಣದಲ್ಲಿ ಪಥಸಂಚಲನ (Rss Rout March) ನಡೆಸಲು ಆರ್‌ಎಸ್‌ಎಸ್‌ ಸಿದ್ಧತೆ ನಡೆಸಿತ್ತು. ಇದನ್ನೂ ಓದಿ:  ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ- ಆರ್‌ಎಸ್‌ಎಸ್‌ಗೆ ಪ್ರಿಯಾಂಕ್‌ ಪ್ರಶ್ನೆ

ಆರ್‌ಎಸ್‌ ಪಥಸಂಲಚನಕ್ಕೆ ಸಿದ್ಧತೆ ಮಾಡುತ್ತಿರುವಾಗ ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿದೆ. ಅನುಮತಿ ನಿರಾಕರಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನ ಮಾಡಿಸಿದ್ದಾರೆ.

ಸೇಡಂ ಪಟ್ಟಣದ ಮಾತೃ ಛಾಯ ಕಾಲೇಜಿನಿಂದ ಗಣ ವೇಶ ಧರಿಸಿ ಪಥಸಂಚಲನ ಆರಂಭಿಸಿದರು. ಆರ್‌ಎಸ್‌ಎಸ್ ಕಾರ್ಯಕರ್ತರ ಪಥ ಸಂಚಲನದ ಮೇಲೆ ಸಾರ್ವಜನಿಕರು ಹೂವಿನ ರಾಶಿ ಸುರಿದು ಸ್ವಾಗತಿಸಿದರು.

ಸರ್ಕಾರದ ಆದೇಶವನ್ನು ಧಿಕ್ಕರಿಸಿ ಶಾಂತಯುತವಾಗಿ ಪಥಸಂಚಲನ ನಡೆಸಿದ್ದಕ್ಕೆ 200ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ಅನುಮತಿ ನಿರಾಕರಿಸಿದ್ದು ಯಾಕೆ?
ಅರ್ಜಿದಾರರು ಯಾವುದೇ ಸಕ್ಷಮ ಪ್ರಾಧಿಕಾರಗಳಿಂದ ಮುಂಚಿತವಾಗಿ ಅನುಮತಿ ಪಡೆದುಕೊಂಡಿಲ್ಲ. ಇದನ್ನೂ ಓದಿ:  ಆರ್‌ಎಸ್‌ಎಸ್‌ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್‌ | ಹೈಕೋರ್ಟ್‌ನಲ್ಲಿ ಏನಾಯಿತು?

ಸದ್ಯದ ಪರಿಸ್ಥಿತಿಯಲ್ಲಿ ಪಥಸಂಚಲನ ಮಾಡುವುದರಿಂದ ತುಂಬಾ ತೊಂದರೆಗಳು ಆಗುವ ಸಾಧ್ಯತೆ ಇರುತ್ತದೆ. ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಕಡೆ ಪರ ವಿರೋಧಗಳು ನಡೆಯುತ್ತಿದೆ.

ಚಿತ್ತಾಪುರ ಪಟ್ಟಣದಲ್ಲಿ ಭೀಮ್ ಆರ್ಮಿ ಸಂಘಟನೆಯವರು ಭೀಮ ಪಥಸಂಚಲನ ಹಮ್ಮಿಕೊಳ್ಳುವುದಾಗಿ ತಿಳಿಸಿ ವಿರೋಧ ವ್ಯಕ್ತಪಡಿಸಿರುತ್ತಾರೆ. ಅ.18 ರಂದು ಸೇಡಂ ಪಟ್ಟಣದಲ್ಲಿಯು ಸಹ ಆರ್‌ಎಸ್‌ಎಸ್‌ ಸಂಘಟನೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುತ್ತಾರೆ. ಅದೇ ರೀತಿ ಸೇಡಂ ಪಟ್ಟಣದಲ್ಲಿಯು ಸಹ ಭೀಮ ಆರ್ಮಿ ಮತ್ತು ಇತರೆ ದಲಿತ ಸಂಘಟನೆಯವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ.

ಕಲಬುರಗಿಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಬಲಿಗರಿಂದ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಂದ ಆರ್‌ಎಸ್‌ಎಸ್‌ ಪಥಸಂಚಲನದ ವಿರುದ್ದ ಪ್ರತಿಭಟನೆ ಹಮ್ಮಿಕೊಂಡಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಕೋಮುಗಲಭೆಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ.

Share This Article