ಯಶೋಮಾರ್ಗ ಪರಿಶ್ರಮಕ್ಕೆ ಸಿಕ್ತು ಪ್ರತಿಫಲ: ಭರ್ತಿಯಾಯ್ತು ಬತ್ತಿ ಹೋಗಿದ್ದ ತಲ್ಲೂರು ಕೆರೆ

Public TV
1 Min Read

ಕೊಪ್ಪಳ: ನಟ ಯಶ್ ತಮ್ಮ ಯಶೋಮಾರ್ಗದಿಂದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿನ ಹೂಳು ತೆಗೆಯುವ ಕೆಲಸ ಮಾಡಿಸಿದ್ದರು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ತಲ್ಲೂರು ಕೆರೆ ತುಂಬಿದೆ. ಸೋಮವಾರ ಯಶ್ ಹಾಗೂ ರಾಧಿಕಾ ಪಂಡಿತ್ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಲಿದ್ದಾರೆ.

ಸತತ ಮೂರ್ನಾಲ್ಕು ವರ್ಷಗಳ ಬರದಿಂದ ಸಂಪೂರ್ಣವಾಗಿ 96 ಎಕರೆ ವಿಸ್ತೀರ್ಣದ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಅಲ್ಲದೇ ಸಂಪೂರ್ಣವಾಗಿ ಹೂಳು ಕೂಡಾ ತುಂಬಿಕೊಂಡಿತ್ತು. ಕೆರೆಯಲ್ಲಿ ತುಂಬಿರೋ ಹೂಳು ತಗೆಯಲು ಕಳೆದ ಫೆಬ್ರವರಿ ತಿಂಗಳಲ್ಲಿ ಹೂಳು ತಗೆಯಲು ಯಶ್ ದಂಪತಿ ಚಾಲನೆ ನೀಡಿದ್ದರು. ಅಂದು ನೀಡಿದ್ದ ಕೆರೆ ಕಾಯಕಕ್ಕೆ ಇಂದು ಸಾರ್ಥಕತೆ ಸಿಕ್ಕಿದೆ.

ಕೆರೆ ತುಂಬಿರೋದ್ರಿಂದ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಲ್ಲಿನ ರೈತರಿಗೆ ಅನುಕೂಲವಾಗಲಿದೆ. ನಟ ಯಶ್‍ನ ಕಾರ್ಯವನ್ನ ಈ ಭಾಗದ ರೈತರು ಕೊಂಡಾಡುತ್ತಿದ್ದು, ಬರದ ನಾಡಿನ ಭಗೀರಥ ಬಂದಂಗ ಬಂದು ನಮ್ಮೂರು ಕೆರೆ ಅಭಿವೃದ್ಧಿ ಪಡಿಸಿದ್ರು. ಈ ಬಾರಿ ಮಳೆಯೂ ಚೆನ್ನಾಗಿ ಆಯ್ತು, ಕೆರೆನೂ ತುಂಬಿದೆ ಅಂತ ಗ್ರಾಮಸ್ಥರು ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಯಶೋ ಮಾರ್ಗದಿಂದ ತಲ್ಲೂರು ಕೆರೆಯನ್ನು 4 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ನಟ ಯಶ್ ಹಾಗೂ ರಾಧಿಕಾ ಪಂಡಿತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶೋ ಮಾರ್ಗದ ಕಾರ್ಯದ ಬಗ್ಗೆ ರೈತರೊಂದಿಗೆ, ಗ್ರಾಮಸ್ಥರೊಂದಿಗೆ ಸಂತಸ ಹಂಚಿಕೊಳ್ಳಲಿದ್ದಾರೆ.

https://www.youtube.com/watch?v=hKy92VBhRAY

https://www.youtube.com/watch?v=JRN6dKohV5k

https://www.youtube.com/watch?v=n1r_Ui38aCI

Share This Article
Leave a Comment

Leave a Reply

Your email address will not be published. Required fields are marked *