ಚಾ.ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ – ಸಚಿವ, ಶಾಸಕರ ನಡುವೆ ಜಟಾಪಟಿ

Public TV
1 Min Read

ಚಾಮರಾಜನಗರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಸಚಿವ ಮತ್ತು ಶಾಸಕರ ನಡುವೆ ಜಟಾಪಟಿ ನಡೆದಿದೆ.

ಕಾವೇರಿ ಕುಡಿಯುವ ನೀರಿನ ಸಮಸ್ಯೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಾಸಕರತ್ತ ಬೊಟ್ಟು ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಉತ್ತರಿಸಿದರು. ಈ ವೇಳೆ ಸಚಿವ ವೆಂಕಟೇಶ್ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ನಡುವೆ ಮಾತಿನ ಜಟಾಪಟಿ ನಡೆಯಿತು.

ನಿನ್ನ ಜವಾಬ್ದಾರಿ ಮಾಡಪ್ಪ ಎಂದು ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ವೆಂಕಟೇಶ್ ಹೇಳಿದರು. ಡಿಸಿ ಬಳಿ ಪ್ರಾಕೃತಿಕ ವಿಕೋಪ ಅನುದಾನ ಇದೆ. ಪಟ್ಟಣಪ್ರದೇಶಕ್ಕೆ ಅನುದಾನ ಕೊಡುವ ಜವಾಬ್ದಾರಿ ಡಿಸಿ ಅವರದ್ದು ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ‘ಹೇಳಿದ್ದನ್ನ ಕೇಳ್ರೀ… ಜವಾಬ್ದಾರಿ ಡಿಸಿಯದ್ದೆ ಅಂತ ಒಪ್ಕೊಳ್ಳೋಣ’ ಎಂದು ಸಚಿವರು ಪ್ರತಿಯಾಗಿ ಮಾತನಾಡಿದ್ದಾರೆ. ಇದು ಡಿಸಿ ಕರ್ತವ್ಯ ಎಂದು ಶಾಸಕ ಉತ್ತರಿಸಿದರು. ಇದು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇದ್ದಮೇಲೆ ಡಿಸಿ ಹೇಗೆ ಜವಾಬ್ದಾರಿ ಎಂದು ಸಚಿವರು ಪ್ರಶ್ನಿಸಿದರು. ಕ್ರಿಯಾ ಯೋಜನೆಗೆ ಸಹಿ ಹಾಕೋದೆ ಡಿಸಿ ಅಂತ ಶಾಸಕ ಪ್ರತಿಯಾಗಿ ಮಾತನಾಡಿದರು. ಪ್ರಾಕೃತಿಕ ವಿಕೋಪ ಅನುದಾನ ಬಳಕೆಗೆ ಬರ ಘೋಷಣೆಯಾಗಬೇಕು. ಅದೇ ಬೇರೆ ಹಣ ಎಂದು ಸಚಿವರು ಸಮಜಾಯಿಸಿ ನೀಡಿದರು.

ಕುಡಿಯುವ ನೀರಿಗೆ ವಿಶೇಷ ಅನುದಾನ ಇದೆ ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಇದ್ದರೆ ಕೊಡ್ಸೋಣ ಬಿಡಪ್ಪ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ.

Share This Article