ಅಫ್ಘಾನಿಸ್ತಾನದ ವಿಮಾನ ಕಾರ್ಯಾಚರಣೆಗೆ ಯುಎಇ ಜೊತೆ ತಾಲಿಬಾನ್ ಒಪ್ಪಂದ

Public TV
1 Min Read

ಕಾಬೂಲ್: ಅಫ್ಘಾನಿಸ್ತಾನದಲ್ಲಿ ವಿಮಾನ ಕಾರ್ಯಾಚರಣೆ ಹಾಗೂ ವಿಮಾನ ನಿಲ್ದಾಣ ನಿರ್ವಹಣೆ ಕುರಿತು ತಾಲಿಬಾನ್, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ತಾಲಿಬಾನ್ ಯುಎಇ, ಟರ್ಕಿ ಹಾಗೂ ಕತಾರ್‌ನೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ತಾಲಿಬಾನ್‌ನ ಸಾರಿಗೆ ಮತ್ತು ನಾಗರಿಕ ವಿಮಾನಯಾನದ ಉಪ ಮಂತ್ರಿ ಗುಲಾಮ್ ಜೈಲಾನಿ ವಫಾ ಅವರು ಮೊದಲ ಉಪ ಪ್ರಧಾನಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದರ್ ಅವರ ಸಮ್ಮುಖದಲ್ಲಿ ಮಂಗಳವಾರ ಜಿಎಎಸಿ ನಿಗಮದ ಪ್ರತಿನಿಧಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಇದನ್ನೂ ಓದಿ: ಹೆಚ್‍ಡಿಕೆ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?- ಈಶ್ವರಪ್ಪ

ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಮಾತನಾಡಿದ ಮುಲ್ಲಾ ಬರದಾರ್, ದೇಶದ ಭದ್ರತೆ ಬಲವಾಗಿದೆ ಹಾಗೂ ಇಸ್ಲಾಮಿಕ್ ಎಮಿರೇಟ್ಸ್, ವಿದೇಶಿ ಹೂಡಿಕೆದಾರರೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ. ಎಲ್ಲಾ ವಿದೇಶೀ ವಿಮಾನಯಾನ ಸಂಸ್ಥೆಗಳು ಅಫ್ಘಾನಿಸ್ತಾನಕ್ಕೆ ಸುರಕ್ಷಿತವಾಗಿ ಹಾಗೂ ವಿಶ್ವಾಸಾರ್ಹವಾಗಿ ಹಾರಾಟ ಪ್ರಾರಂಭಿಸಬಹುದು ಎಂದು ಭರವಸೆ ನಿಡಿದರು. ಇದನ್ನೂ ಓದಿ: ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಮನೆ, ಕಚೇರಿ ಮೇಲೆ ಇಡಿ ದಾಳಿ

ಆಗಸ್ಟ್ 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತು ಹಾಗೂ ಹಿಂದಿನ ಸರ್ಕಾರ ಪತನವಾಯಿತು. 2021ರ ಡಿಸೆಂಬರ್‌ನಲ್ಲಿ ಟರ್ಕಿಶ್ ಹಾಗೂ ಕತಾರಿ ಕಂಪನಿಗಳು ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಜ್ಞಾಪಕ ಪತ್ರಕ್ಕೆ ಸಹಿ ಹಾಕಿದವು. ಅಫ್ಘಾನಿಸ್ತಾನದಲ್ಲಿ ತೀವ್ರ ಆರ್ಥಿಕ ಪರಿಸ್ಥಿತಿ ಇರುವುದರಿಂದ ಈಗಲೂ ಬಾಲ್ಖ್, ಹೆರಾತ್, ಕಂದಹಾರ್ ಹಾಗೂ ಖೋಸ್ಟ್ ನಗರಗಳ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಲು ಹೆಣಗಾಡುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *