ಮಹಿಳೆಯರಿಗೆ ಮತ್ತೆ ವಿಶ್ವವಿದ್ಯಾಲಯಗಳನ್ನು ತೆರೆದ ತಾಲಿಬಾನ್

Public TV
1 Min Read

ಕಾಬೂಲ್: ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 6 ಪ್ರಾಂತ್ಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ತೆರೆಯಲಾಗಿದೆ ಎಂದು ತಾಲಿಬಾನ್ ಬುಧವಾರ ತಿಳಿಸಿದೆ.

ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡ ಬಳಿಕ ತಮ್ಮ ಆಳ್ವಿಕೆಯಲ್ಲಿ ದೇಶಾದ್ಯಂತ ಕಠಿಣ ಕ್ರಮಗಳನ್ನು ವಿಧಿಸುತ್ತಿದೆ. ಮುಖ್ಯವಾಗಿ ಹುಡುಗಿಯರನ್ನು ಶಿಕ್ಷಣದಿಂದ ಹಾಗೂ ಮಹಿಳೆಯರನ್ನು ಸಾರ್ವಜನಿಕ ಜೀವನ ಮತ್ತು ಕೆಲಸದಿಂದ ವಂಚಿಸುತ್ತಲೇ ಇದೆ. 1990ರ ಕಾಲದಲ್ಲೂ ಇದೇ ರೀತಿಯ ಸಂದರ್ಭ ಏರ್ಪಟ್ಟಿತ್ತು.

ತಾಲಿಬಾನ್ ವಿಧಿಸಿರುವ ನಿರ್ಬಂಧಗಳಲ್ಲಿ ಹೆಚ್ಚಿನವು ಮಹಿಳೆಯರ ಮೇಲೆ ಪ್ರಭಾವ ಬೀರುತ್ತದೆ. ಮಹಿಳೆಯರನ್ನು ಆರೋಗ್ಯ ಹಾಗೂ ಬೋಧನಾ ವಲಯಗಳನ್ನು ಹೊರತು ಪಡಿಸಿ ಇತರ ಉದ್ಯೋಗಗಳಿಂದ ನಿರ್ಬಂಧಿಸಿದೆ. ಹುಡುಗಿಯರು 6ನೇ ತರಗತಿಯ ಬಳಿಕ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಹಿಳೆಯರಿಗೆ ಹಿಜಬ್ ಧರಿಸಲು ಒತ್ತಾಯಿಸುತ್ತಿದೆ. ಆದರೆ ಬುರ್ಖಾ ಹೇರಿಕೆಯ ಬಗ್ಗೆ ಸ್ವಲ್ಪ ವಿರಾಮ ದೊರಕಿದೆ. ಇದನ್ನೂ ಓದಿ: ತೈಲ ಖರೀದಿಸಲು ಶ್ರೀಲಂಕಾಗೆ 3 ಸಾವಿರ ಕೋಟಿ ಸಾಲ ನೀಡಿದ ಭಾರತ

ತಾಲಿಬಾನ್ ಸಂಸ್ಕೃತಿ ಹಾಗೂ ಮಾಹಿತಿ ಸಚಿವಾಲಯ ಬುಧವಾರ ತಿಳಿಸಿರುವ ಮಾಹಿತಿಯ ಪ್ರಕಾರ ನಂಗರ್‌ಹಾರ್, ಕಂದಹಾರ್, ಹೆಲ್ಮಂಡ್, ಫರಾಹ್, ನಿಮ್ರೋಜ್ ಹಾಗೂ ಲಗ್ಮನ್ ಪ್ರಾಂತ್ಯಗಳಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಮಹಿಳೆಯರಿಗೂ ತೆರೆಯಲಾಗಿದೆ ಎಂದು ತಿಳಿಸಿದೆ.

ಅಫ್ಘಾನಿಸ್ತಾನದ ಈ ಆರು ಪ್ರಾಂತ್ಯಗಳು ಇತರ ಪ್ರದೇಶಗಳಿಗಿಂತ ಬೆಚ್ಚನೆಯ ಹವಾಮಾನ ಹೊಂದಿದೆ ಹೀಗಾಗಿ ಈ ಪ್ರಾಂತ್ಯಗಳಲ್ಲಿ ವಿಶ್ವವಿದ್ಯಾಲಯಗಳನ್ನು ಮತ್ತೆ ತೆರೆಯಲಾಗಿದೆ. ಪುರುಷರು ಬೆಳಗ್ಗೆ ಹಾಗೂ ಮಹಿಳೆಯರು ಮಧ್ಯಾಹ್ನ ತರಗತಿಗಳಿಗೆ ಹಾಜರಾಗಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

ಹೆಣ್ಣುಮಕ್ಕಳ ಶಿಕ್ಷಣವನ್ನು ನಿರಾಕರಿಸಿದ್ದಕ್ಕೆ ಭಾರೀ ಟೀಕೆಗೆ ಒಳಗಾಗಿದ್ದೇವೆ. ಅಫ್ಘಾನಿಸ್ತಾನದಲ್ಲಿ ಮಾರ್ಚ್ ಅಂತ್ಯದ ವೇಳೆ ಎಲ್ಲಾ ಹೆಣ್ಣು ಮಕ್ಕಳು ಶಾಲೆಗೆ ಮರಳಲಿದ್ದಾರೆ ಎಂದು ತಾಲಿಬಾನ್ ಭರವಸೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *