ಕಾಡಾನೆ ಹಾವಳಿ ಗಂಭೀರವಾಗಿ ಪರಿಗಣಿಸಿ, ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ: ಬೊಮ್ಮಾಯಿ

Public TV
2 Min Read

ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆಗಳ (Elephant) ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ನಾನು ಸಭೆಯನ್ನು ನಡೆಸಿ ವಿಶೇಷ ಕಾರ್ಯಪಡೆಯನ್ನು ರಚನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಹಾಸನ (Hassan) ಜಿಲ್ಲೆ, ಬೇಲೂರು ತಾಲೂಕಿನ, ಮಾಯಗೊಂಡನಹಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲವಿದ್ದಾಗ ಬಂದಂತಹ ಆನೆಗಳು ವಾಪಾಸ್ ಹೋಗಿಲ್ಲ. ಕೆಲವು ಸಂದರ್ಭದಲ್ಲಿ ಜನರು ಕಾಡಿಗೆ ಹೋದಾಗ, ವಾತಾವರಣ ಬದಲಾವಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳಿರುವುದರಿಂದ ಕಾಡಾನೆಗಳ ದಾಳಿಗಳು ಉಂಟಾಗಿವೆ. ಎಲ್ಲಿ ಕಾಡಾನೆಗಳ ಗುಂಪಿದೆ ಅಲ್ಲಿ ಅವುಗಳನ್ನು ಚದುರಿಸುವುದು ಕಷ್ಟ. ಈ ವರ್ಷ 15-16 ಆನೆಗಳನ್ನು ವಾಪಾಸ್ ಕಳುಹಿಸಿದ್ದೇವೆ. ಈಗಾಗಲೇ ವಿಶೇಷ ಕಾರ್ಯಪಡೆಯನ್ನು ಮಾಡಿದ್ದೇವೆ. ವಿಶೇಷ ಮೆನ್ ಹಾಗೂ ಟ್ರೈನಿಂಗ್ ಕೊಡುತ್ತಿದ್ದೇವೆ. ಇವರಿಗೆ ಉಪಕರಣ, ವಾಹನಗಳು ಹಾಗೂ ಎಲ್ಲವನ್ನೂ ಕೊಟ್ಟು ಒಂದು ಕಂಟ್ರೋಲ್ ರೂಂ ಮಾಡಲಿದ್ದೇವೆ ಎಂದರು.

ಕಾಡಾನೆಗಳ ನಿಯಂತ್ರಣಕ್ಕೆ ಪ್ರತಿದಿನ ಪೆಟ್ರೋಲಿಂಗ್, ಕಾರ್ಯಾಚರಣೆ ಮಾಡುತ್ತಾರೆ. ಎಲ್ಲೆಲ್ಲಿ ಆನೆಗಳು ಜಾಸ್ತಿ ಇದೆ ಅಲ್ಲಿ ಒಂದು ವಾರ, 10 ದಿನ ಎಲ್ಲಾ ಸ್ವ್ಯಾಡ್‌ಗಳು, ಫಾರೆಸ್ಟ್ ಅಧಿಕಾರಿಗಳು ಬಂದು ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸೂಚನೆಯನ್ನು ಕೊಟ್ಟಿದ್ದೇವೆ. ಎಷ್ಟು ಬೇಕು ಅಷ್ಟು ದುಡ್ಡನ್ನು ಕೊಡಲು ಸಿದ್ಧನಿದ್ದೇನೆ. ಈ ವರ್ಷದ ಬಜೆಟ್‌ನಲ್ಲಿ 100 ಕೋಟಿ ರೂ. ಇಟ್ಟಿದ್ದೇನೆ. ಒಂದು ತರಹದ ಫೆನ್ಸಿಂಗ್ ಅನ್ನು ಬಂಡೀಪುರದಲ್ಲಿ ಟ್ರಯಲ್ ಮಾಡುತ್ತಿದ್ದೇವೆ. ಅದನ್ನು ಅಲ್ಲಿಂದ ಇಲ್ಲಿಗೆ ತರುವ ಪ್ರಯತ್ನ ಮಾಡುತ್ತೇವೆ. ಎಲಿಫೆಂಟ್ ಕಾರಿಡಾರ್ ಅನ್ನು ಸಂಪೂರ್ಣವಾಗಿ ಕಾಯುವಂತಹ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸೆರೆ ಹಿಡಿದಿದ್ದ ಆನೆ ಜೊತೆ ಕಾದಾಟ – ದಸರಾ ಆನೆ ಗೋಪಾಲಸ್ವಾಮಿ ಸಾವು

ಕಾಡಾನೆಗಳನ್ನು ಸ್ಥಳಾಂತರ ಮಾಡಲು ವಿಶೇಷವಾದಂತಹ ಕಾರ್ಯಪಡೆ ರಚಿಸಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತವನ್ನು 15 ಲಕ್ಷ ರೂ. ಏರಿಸಿದ್ದೇವೆ. ಮೃತರ ಕುಟುಂಬದ ಓರ್ವರಿಗೆ ಸರ್ಕಾರಿ ನೌಕರಿ ಕೊಡುವ ಬಗ್ಗೆ ಗಂಭೀರವಾದ ಚರ್ಚೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಯಾರಿಗೆ ಅಂಟು ರೋಗ ಇದೆ ಎಂದು ಜನ ತೀರ್ಮಾನ ಮಾಡ್ತಾರೆ: ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *