ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ – ಡಿಸಿ, ಎಸ್ಪಿಗಳಿಗೆ ಕೃಷ್ಣಬೈರೇಗೌಡ ಸೂಚನೆ

Public TV
1 Min Read

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಇನ್ನೊಂದು ವಾರದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಜೊತೆ ಸಭೆ ಮಾಡಿ ಎಚ್ಚರಿಕೆ ಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ಡಿಸಿ-ಎಸ್ಪಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಸಿಎಂ ಸೂಚನೆ ಮೇರೆಗೆ ಎಲ್ಲಾ ಡಿಸಿ ಹಾಗೂ ಎಸ್ಪಿಗಳ ಜೊತೆ ಸಚಿವರು ಸಭೆ ನಡೆಸಿ, ಡಿಸಿ-ಎಸ್ಪಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.ಇದನ್ನೂ ಓದಿ: ಕಾದುನೋಡಿ.. ಸುದೀಪ್‌ ಸರ್‌ ಇಲ್ಲದೇ ‘ಬಿಗ್‌ ಬಾಸ್‌’ ಇಲ್ಲ: ಶೋ ನಿರ್ದೇಶಕ ಪ್ರಕಾಶ್‌

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗೆ ಕಿರುಕುಳ ಕಡಿವಾಣ ಹಾಕಲು ಸಿಎಂ ಸೂಚನೆ ಕೊಟ್ಟಿದ್ದರು. ಹೀಗಾಗಿ ಈ ವಾರದಲ್ಲಿ ಡಿಸಿ, ಎಸ್ಪಿಗಳು ಫೈನಾನ್ಸ್ ಸಂಸ್ಥೆಗಳ ಜೊತೆ ಅವರ ಜೊತೆ ಸಭೆ ಮಾಡಬೇಕು ಎಂದು ತಿಳಿಸಿದ್ದರು. ಆರ್‌ಬಿಐ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಎಚ್ಚರ ಕೊಡಬೇಕು. ಅತಿರೇಕದ ಸಾಲ ಪಾವತಿ ಕ್ರಮ ತೆಗೆದುಕೊಂಡರೇ ಕೇಸ್ ದಾಖಲು ಮಾಡುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.

ಫೈನಾನ್ಸ್ ಕಂಪನಿಗಳು ಯದ್ವಾತದ್ವಾ ಸಾಲ ಕೊಡುತ್ತಿದ್ದಾರೆ. 2 ಲಕ್ಷ ರೂ. ಮೇಲ್ಪಟ್ಟು ಸಾಲ ಕೊಡಬಾರದು. ಇದು ಆರ್‌ಬಿಐ ನಿಯಮ. ಬೇಜವಾಬ್ದಾರಿಯಾಗಿ ಸಾಲ ಕೊಡುವುದು ನಿಯಂತ್ರಣ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಆರ್‌ಬಿಐ ನಿಯಮ ಪಾಲನೆಗೆ ಫೈನಾನ್ಸ್ ಅವರಿಗೆ ಸೂಚನೆ ಕೊಡುವಂತೆ ತಿಳಿಸಲಾಗಿದೆ. ಆರ್‌ಬಿಐ ಅವರು ನಮಗೆ ಯಾವುದೇ ಅಧಿಕಾರ ಕೊಟ್ಟಿಲ್ಲ. ಹೀಗಾಗಿ ಇಂತಹ ಕಿರುಕುಳ ಕೊಡದಂತೆ ತಡೆಯಲು ಕ್ರಮಕ್ಕೆ ನಾವು ಮುಂದಾಗಿದ್ದೇವೆ. ಇದನ್ನು ಕಟ್ಟುನಿಟ್ಟಾಗಿ ಫೈನಾನ್ಸ್ ಅವರಿಗೆ ಸೂಚನೆ ಕೊಡಲು ತಿಳಿಸಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್

Share This Article