ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

Public TV
1 Min Read

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ, ಹಿಂದೂ ಕಾರ್ಯಕರ್ತ ಆತುಲ್ ಕುಮಾರ್ ಸಬರಲಾಲ್ ಮಧುಗಿರಿ ಮೋದಿ ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.

ಮಧುಗಿರಿ ಮೋದಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರು ಅಂಗಡಿಗಳು ಇಡಬಾರದು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಗಂಗಾವತಿ ತಹಶಿಲ್ದಾರ್ ಎಫ್‍ಐಆರ್ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

ಮಧುಗಿರಿ ಮೋದಿ ಅವರ ವಿರುದ್ಧ ತಹಶಿಲ್ದಾರ್ 153(ಎ)(ರಾಷ್ಟೀಯ ಸಮಗ್ರತೆಗೆ ಬಾಧಕವಾಗುವ ಹೇಳಿಕೆ), 505(2)(ವರ್ಗಗಳ ನಡುವೆ ವೈರ, ದ್ವೇಷ ಅಥವಾ ವೈಮನಸ್ಯವನ್ನು ಉಂಟುಮಾಡುವ ಹೇಳಿಕೆ), 506(ಕ್ರಿಮಿನಲ್ ಬೆದರಿಕೆ) ಅಡಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಕೇಸ್ ದಾಖಲಾಗಿದೆ.

ಮಧುಗಿರಿ ಅವರು ಈ ಕುರಿತು ವೀಡಿಯೋ ಮಾಡಿ ಸೊಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವೀಡಿಯೋ ಫುಲ್ ವೈರಲ್ ಆಗಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿಯೂ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

ಮಧುಗಿರಿ ಅವರು ಅನ್ಯ ಧರ್ಮಿಯರು ದುಖಾನ್(ಅಂಗಡಿ) ಎತ್ತುಕೊಂಡು ಹೋಗ್ತಾ ಇರಬೇಕೆಂದು ಎಚ್ಚರಿಕೆ ನೀಡಿದ್ದು, ಈ ಸ್ಥಳದಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡಲು ಅರ್ಹರು. ದೇವಸ್ಥಾನದ ಎದುರಿಗೆ ಅಂಗಡಿ ಇಟ್ಟವರು ತಾಕತ್ತಿದ್ದರೆ ಜೈ ಶ್ರೀರಾಮ್ ಎಂದು ಹೇಳಿ ಅಂಗಡಿ ಇಟ್ಟುಕೊಟ್ಟಿ. ಆಂಜನೇಯನ ಫೋಟೋ ಹಾಕಿಕೊಂಡು ಅಂಗಡಿ ಇಟ್ಟುಕೊಳ್ಳಿ ಎಂದು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *