ರಾಮನಗರಕ್ಕೆ ಟಗರು ಟೀಂ ಭೇಟಿ – ಶಿವಣ್ಣನ ನೋಡಲು ಮುಗಿಬಿದ್ದ ಅಭಿಮಾನಿಗಳು

Public TV
1 Min Read

ರಾಮನಗರ: ಸ್ಯಾಂಡಲ್‍ವುಡ್‍ನ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರದ ಪ್ರಮೋಶನ್‍ಗೆ ನಟ ಶಿವರಾಜ್‍ಕುಮಾರ್ ಹಾಗೂ ಧನಂಜಯ್ ರಾಮನಗರಕ್ಕೆ ಭೇಟಿ ನೀಡಿದ್ದಾರೆ.

ರಾಮನಗರ ಮಾತ್ರವಲ್ಲದೇ ಕನಕಪುರ ಹಾಗೂ ಚನ್ನಪಟ್ಟಣ ಚಿತ್ರಮಂದಿರಗಳಿಗೆ ಶಿವರಾಜ್‍ಕುಮಾರ್ ಹಾಗೂ ಧನಂಜಯ್ ಭೇಟಿ ನೀಡಿದರು. ಈ ವೇಳೆ ಅಭಿಮಾನಿಗಳು ನಟರನ್ನ ನೋಡಲು ಮುಗಿಬಿದ್ದರು. ರಾಮನಗರದ ಶಾನ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ಶಿವರಾಜ್‍ಕುಮಾರ್ ಗೆ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ರು.

ಅಭಿಮಾನಿಗಳು ಶಿವಣ್ಣನ ಆಗಮನಕ್ಕೆ ಪಟಾಕಿ ಸಿಡಿಸಿ, ಹೂವಿನ ಹಾರವನ್ನು ಹಾಕಿ, ಕೇಕ್ ಕಟ್ ಮಾಡಿಸುವುದರ ಮೂಲಕ ಸಂಭ್ರಮಾಚರಣೆ ನಡೆಸಿದರು. ಇದೇ ವೇಳೆ ಮಾತನಾಡಿದ ಶಿವಣ್ಣ, ಟಗರು ಚಿತ್ರದ ಯಶಸ್ಸನ್ನ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದೇನೆ. ಎಲ್ಲೆಡೆ ಚಿತ್ರದ ಬಗ್ಗೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಮಾಜಕ್ಕೆ ಸಂದೇಶ ನೀಡುವಂತಹ ಚಿತ್ರ ಎಲ್ಲರಿಗೂ ಸಹ ಇಷ್ಟವಾಗುತ್ತದೆ ಎಂದು ಹೇಳಿದ್ರು.

ಇದೇ ವೇಳೆ ಚಿತ್ರದ ಖಳನಟ ಧನಂಜಯ್ ಮಾತನಾಡಿ, ನಾನು ಎಲ್ಲೇ ಹೋದರೂ ಇದೀಗ ಡಾಲಿ ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಭಿಮಾನಿಗಳ ರೆಸ್ಪಾನ್ಸ್ ಗೆ ಸಕತ್ ಖುಷಿಯಾಗುತ್ತಿದೆ. ಅಲ್ಲದೇ ಶಿವಣ್ಣನ ಜೊತೆ ನಟನೆ ಮಾಡಿರೋದು ತುಂಬಾ ಸಂತಸ ನೀಡಿದೆ ಎಂದು ಆನಂದವನ್ನು ಹಂಚಿಕೊಂಡ್ರು.

Share This Article
Leave a Comment

Leave a Reply

Your email address will not be published. Required fields are marked *