ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

Public TV
1 Min Read

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮದುವೆಯ ಬಳಿಕ ಪತಿ ಜೊತೆ ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ (Bali) ತೆಗೆದ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಗೂಢಚಾರಿ’ ಚಿತ್ರಕ್ಕೆ 6 ವರ್ಷದ ಸಂಭ್ರಮ- ಸೀಕ್ವೆಲ್ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಅಪ್‌ಡೇಟ್

ನವದಂಪತಿ ಮಾನ್ವಿತಾ ಮತ್ತು ಅರುಣ್ ಜೋಡಿ ಬಾಲಿಯಲ್ಲಿ ಕಾಫಿ ಕಿಚನ್ ಸೇರಿದಂತೆ ಹಲವು ಕಡೆ ಭೇಟಿ ಕೊಟ್ಟಿದ್ದಾರೆ. ಪತಿ ಜೊತೆ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ. ಮದುವೆಯ ನಂತರ ಗೋವಾ, ಥೈಲ್ಯಾಂಡ್ ಸೇರಿದಂತೆ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಈ ಜೋಡಿಯ ಕಲರ್‌ಫುಲ್‌ ಫೋಟೋ ನೋಡಿ, ಇವರ ಮೇಲೆ ಯಾರ್‌ ಕಣ್ಣು ಬೀಳದೇ ಇರಲಿ ಎಂದು ಫ್ಯಾನ್ಸ್‌ ಆಶಿಸುತ್ತಿದ್ದಾರೆ.

ಅಂದಹಾಗೆ, ಮೇ 1ರಂದು ಅರುಣ್ ಜೊತೆ ಮಾನ್ವಿತಾ ಕಾಮತ್ ಮದುವೆಯಾದರು. ಅಮ್ಮನ ಆಸೆಯಂತೆಯೇ ಅವರು ಮೆಚ್ಚಿದ ಹುಡುಗನನ್ನೇ ನಟಿ ಹೊಸ ಬಾಳಿಗೆ ಕಾಲಿಟ್ಟರು. ಈಗ ವೈವಾಹಿಕ ಜೀವನ ಮತ್ತು ಕೆರಿಯರ್ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಸದ್ಯ ಮಾನ್ವಿತಾ ನಟನೆಯ ‘ರಾಜಸ್ತಾನ ಡೈರೀಸ್’ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದು ಕನ್ನಡದ ಜೊತೆ ಮರಾಠಿಯಲ್ಲೂ ರಿಲೀಸ್ ಆಗಲಿದೆ. ಪೃಥ್ವಿ ಅಂಬರ್ ಜೊತೆ ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾದಲ್ಲಿ ನಾಯಕಿಯಾಗಿ ಮಾನ್ವಿತಾ ನಟಿಸಿದ್ದಾರೆ.

Share This Article